
ಟೊರಂಟೊ: ಮೊಬೈಲ್ ಫೋನ್ ಉತ್ಪಾದಕ ಬ್ಲ್ಯಾಕ್ ಬೆರ್ರಿ ತನ್ನ ಪ್ರಖ್ಯಾತ ಭೌತಿಕ ಕೀಲಿಮಣೆಯನ್ನು ಹೊಸದಾಗಿ ಬಿಡುಗಡೆ ಮಾಡಿರುವ ಫೋನಿನಲ್ಲಿ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.
ಕೆನಡಾ ಮೂಲದ ಈ ಸಂಸ್ಥೆ ಇತ್ತೀಚಿಗೆ ಕೆನಡಾದಲ್ಲಿ ಬ್ಲ್ಯಾಕ್ ಬೆರ್ರಿ ಲೀಪ್ ಫೋನನ್ನು ಅನಾವರಣಗೊಳಿಸಿದೆ.
ಟಚ್ ಫೋನ್ ಆಗಿರುವ ಇದು ಗ್ರಾಹಕರಿಗೆ ಸ್ಯಾಮ್ಸಂಗ್ ಅಥವಾ ಐಫೋನ್ ಗೆ ಹೋಲಿಸಿದರೆ ಕಡಿಮೆ ಬೆಲೆಯದ್ದಾಗಿರುತ್ತದೆ ಎಂದು ತಿಳಿದುಬಂದಿದೆ. ಒಂದುವರೆ ವರ್ಷದ ಹಿಂದೆ ಈ ಸಂಸ್ಥೆ ಅನಾವರಣ ಮಾಡಿದ್ದ Z೩ ಯನ್ನು ಹೊರತುಪಡಿಸಿದರೆ, ಈ ಸಂಸ್ಥೆಯಿಂದ ಹೊರಬರುತ್ತಿರುವ ಸಂಪೂರ್ಣ ಸ್ಮಾರ್ಟ್ ಫೋನ್ ಇದು.
ಬ್ಲ್ಯಾಕ್ ಬೆರ್ರಿ ಫೋನುಗಳಲ್ಲಿ ಭೌತಿಕಿ ಕೀಲಿಮಣೆ ಸರ್ವೇ ಸಾಮಾನ್ಯ. ಇದು ವ್ಯಾವಹಾರಿಕ ಸಮುದಾಯದಲ್ಲಿ ಅತಿ ಹೆಚ್ಚು ಜನಪ್ರಿಯ. ಈಗ ಬಿಡುಗಡೆಯಾಗಿರುವ ಲೀಪ್ ಫೋನಿನಲ್ಲಿ ೮ ಮೆಗಾ ಪಿಕ್ಸೆಲ್ ಕ್ಯಾಮರಾ ಇದ್ದು ಬ್ಯಾಟರಿ ೨೫ ಘಂಟೆಗಳ ಕಾಲ ಉಳಿಯುತ್ತದೆ ಎಂದು ತಿಳಿದುಬಂದಿದೆ.
Advertisement