ವಿಂಡೋಸ್ 10 ಬಳಿಕ ಮೈಕ್ರೋಸಾಫ್ಟ್ ನಿಂದ ಹೊಸ ಆವೃತ್ತಿ ಇಲ್ಲ

ಇದು ಅಧಿಕೃತ. ವಿಂಡೋಸ್- 10 ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಂನ ಕೊನೆಯ ಆವೃತ್ತಿ. ವಿಂಡೋಸ್ -10 ನಂತರ ಮೈಕ್ರೋಸಾಫ್ಟ್ ವಿಂಡೋಸ್‍ನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇದು ಅಧಿಕೃತ. ವಿಂಡೋಸ್- 10 ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಂನ ಕೊನೆಯ ಆವೃತ್ತಿ. ವಿಂಡೋಸ್ -10 ನಂತರ ಮೈಕ್ರೋಸಾಫ್ಟ್ ವಿಂಡೋಸ್‍ನ ಯಾವುದೇ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವುದಿಲ್ಲ.

ಹಾಗಂತ ವಿಂಡೋಸ್ ಆಪರೇಟಿಂಗ್ ಬಳಕೆದಾರರು ಆತಂಕಪಡುವ ಅಗತ್ಯ ಇಲ್ಲ. ವಿಂಡೋಸ್ ಅನ್ನು ಒಂದು ಉತ್ಪನ್ನವಾಗಿ ನೋಡುವ ಬದಲು ಸೇವೆಯಾಗಿ ರೀ ಬ್ರಾಂಡ್ ಮಾಡಲು ಮೈಕ್ರೋಸಾಫ್ಟ್ ಇಂಥ ತಂತ್ರ ಅನುಸರಿಸಿದೆ. ಮೈಕ್ರೋಸಾಫ್ಟ್ ಈ ಹಿಂದೆ ಪ್ರತಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ವಿಂಡೋಸ್‍ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿತ್ತು.

ಈ ರೀತಿ ಬಿಡುಗಡೆಯಾದ ವಿಂಡೋಸ್‍ನ ಕೊನೆಯ ಆವೃತ್ತಿ ವಿಂಡೋಸ್-10. ಇನ್ನು ಮುಂದೆ ಮೈಕ್ರೋಸಾಫ್ಟ್ ಕಂಪನಿ ಹೊಸ ಆವೃತ್ತಿಗಳ ಬದಲು ನಿಯಮಿತವಾಗಿ ಅಪ್‍ಡೇಟ್‍ಗಳನ್ನು ಕೊಡಲಿದೆ.

10 ವರ್ಷಗಳ ಹಿಂದೆ ಪಿಸಿಗಳ ಜಮಾನಾ ಇತ್ತು. ಆಗ ವಿಂಡೋಸ್ ಮಾತ್ರ ಜನಪ್ರಿಯ ಆಪರೇಟಿಂಗ್ ಸಿಸ್ಟಂ ಆಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ ವಿಂಡೋಸ್‍ನ ಸಿಸ್ಟಂನ ಜನಪ್ರಿಯತೆ ಕುಸಿಯುತ್ತಿದೆ.

ಈಗ ಆ್ಯಪಲ್‍ನ ಐಒಎಸ್ ಮತ್ತು ಗೂಗಲ್‍ನ ಆ್ಯಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂಗಳು ನಿಯಮಿತವಾಗಿ ಅಪ್‍ಡೇಟ್ ಹೊಂದುತ್ತಿವೆ. ಹಾಗಾಗಿ ಮೈಕ್ರೋಸಾಫ್ಟ್ ಕೂಡ ಗೂಗಲ್, ಆ್ಯಪಲ್‍ನ ಮಾದರಿಯನ್ನೇ ಅನುಸರಿಸಲು ಹೊರಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com