9 ಡಾಲರ್ ಗೆ ಕಂಪ್ಯೂಟರ್?

9 ಡಾಲರ್ ಗೆ ಒಂದು ಕಂಪ್ಯೂಟರ್ ಸಿಗುತ್ತದೆ ಎಂದರೆ ನಂಬುತ್ತೀರಾ? ನೀವಿದನ್ನು ನಂಬಲೇ ಬೇಕು. ಆನ್ಲೈನ್ ಕ್ರೌಡ್ ಫಂಡಿಂಗ್...
C.H.I.P.
C.H.I.P.

ನ್ಯೂಯಾರ್ಕ್: 9 ಡಾಲರ್ ಗೆ ಒಂದು ಕಂಪ್ಯೂಟರ್ ಸಿಗುತ್ತದೆ ಎಂದರೆ ನಂಬುತ್ತೀರಾ? ನೀವಿದನ್ನು ನಂಬಲೇ ಬೇಕು. ಆನ್ಲೈನ್ ಕ್ರೌಡ್ ಫಂಡಿಂಗ್ ವೆಬ್ ಸೈಟ್ ಕಿಕ್ ಸ್ಟಾರ್ಟರ್ (Kickstarter) ನ   ಕೆಲವು ತಂತ್ರಜ್ಞರು ಈ ರೀತಿಯ ಕಂಪ್ಯೂಟರ್ ನಿರ್ಮಿಸಲು ಇದೀಗ ಮುಂದಾಗಿದ್ದಾರೆ.

ಈ ಯೋಜನೆಗಾಗಿ ಇವರು 50000 ಡಾಲರ್ ಸಂಗ್ರಹ ಮಾಡಲು ತೊಡಗಿದ್ದು, ಈಗಾಗಲೇ 612, 893 ಡಾಲರ್ ಸಂಗ್ರಹವಾಗಿದೆ. ಇದೊಂದು ಪೋರ್ಟೆಬಲ್ ಚಿಪ್ ಆಗಿದ್ದು, ಇದರ ಗಾತ್ರ 2.3 ಇಂಚು ಇದೆ.

ಈ C.H.I.P ಬಳಸಿ  1 ಜಿಬಿ ಪ್ರೊಸಸರ್, 512 ಎಂಬಿ ರಾಮ್, 4 ಜಿಬಿ ಆನ್ ಬಾರ್ಡ್ ಮೆಮೊರಿ ಸಾಮರ್ಥ್ಯ ಕಂಪ್ಯೂಟರ್ಗೆ ಸಿಗುತ್ತದೆ. ಇದನ್ನು ಅಸೆಂಬಲ್ ಮಾಡುವುದು ಹೇಗೆ ಎಂಬುದನ್ನು ತುಂಬಾ ಸ್ವಾರಸ್ಯಕರವಾಗಿ ವೀಡಿಯೋದಲ್ಲಿ ತೋರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com