ತಮ್ಮನ್ನು ತಿನ್ನುವುದರ ವಿರುದ್ಧ ಸಸ್ಯಗಳು ಸಂರಕ್ಷಿಸಿಕೊಳ್ಳುತ್ತವೆ

ಸಸ್ಯಹಾರಿಗಳೇ ಗಮನಿಸಿ. ನೀವು ಮುಂದಿನ ಬಾರಿ ಸೊಪ್ಪು ಸದೆಯನ್ನು ತಿನ್ನುವಾಗ ಸ್ವಲ್ಪ ದಯಾಮಯಿಗಳಾಗಿ! ಹೌದು, ಮಿಸ್ಸೋರಿ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸಸ್ಯಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಸಸ್ಯಹಾರಿಗಳೇ ಗಮನಿಸಿ. ನೀವು ಮುಂದಿನ ಬಾರಿ ಸೊಪ್ಪು ಸದೆಯನ್ನು ತಿನ್ನುವಾಗ ಸ್ವಲ್ಪ ದಯಾಮಯಿಗಳಾಗಿ!

ಹೌದು, ಮಿಸ್ಸೋರಿ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಸಸ್ಯಗಳು ತಮ್ಮನ್ನು ತಿನ್ನುವ ಶಬ್ದಕ್ಕೆ ಪ್ರತಿಕ್ರಿಯಿಸಿ ಅಪಾಯಕ್ಕೆ ಪ್ರತಿಕ್ರಿಯಿಸುತ್ತವೆ.

ಕಂಬಳಿಹುಳುಗಳು ಎಲೆಗಳನ್ನು ತಿನ್ನುವಾಗ ಶಬ್ದವನ್ನು ಗ್ರಹಿಸಿ ರಕ್ಷಣಾತ್ಮಕ ತಂತ್ರಗಳನ್ನು ಸಸ್ಯಗಳು ಬಳಸಬಲ್ಲವು ಎಂದು ಸಂಶೋಧಕರ ತಂಡ ತಿಳಿಸಿದೆ.

ಸಸ್ಯಗಳು ಈ ಸಮಯದಲ್ಲಿ ಕಂಬಳಿಹುಳುಗಳಿಗೆ ಇಷ್ಟವಾಗದ ಹೆಚ್ಚಿನ ಸಾಸಿವೆ ಎಣ್ಣೆಯ ದ್ರವಸೂಸಿ ಅವುಗಳನ್ನು ವಿಮುಖ ಮಾಡುತ್ತವೆ ಎಂದು ಅಧ್ಯಯನ ತಿಳಿಸಿದೆ.

ಆದರೆ ಗಾಳಿ ಇಂತಹುದೇ ಶಬ್ದ ಮಾಡಿದರೂ ಸಸ್ಯಗಳು ಯಾವುದೇ ರಕ್ಷಣಾತ್ಮಕ ಆಟ ಆಡುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ.

ಕೋಸು ಮತ್ತು ಸಾಸಿವೆ ಸಸ್ಯವರ್ಗಕ್ಕೆ ಸೇರಿದ ಸಣ್ಣ ಹೂಗಳನ್ನು ಬಿಡುವ ಅರಾಬಿಡೋಪ್ಸಿಸ್ ಸಸ್ಯದ ಮೇಲೆ ಕ್ಯಾಟರ್ಪಿಲ್ಲರ್ ಹುಳುವನ್ನು ಬಿಟ್ಟು ಈ ಸಂಶೋಧನೆ ಮಾಡಲಾಗಿದೆ.

ಲೇಸರ್ ತಂತ್ರಜ್ಞಾನ ಬಳಸಿ ಕಂಬಳಿಹುಳ ಎಲೆ ತಿನ್ನುವ ವೇಗಕ್ಕೆ ಎಲೆಯ ಚಲನೆಯನ್ನು ಅಳೆಯಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com