ಇನ್ನು ಆಫ್ ಲೈನ್ ನಲ್ಲೂ ಸಿಗುತ್ತೆ ಗೂಗಲ್ ಸರ್ಚ್

ಗೂಗಲ್ ಒಟ್ಟೊಟ್ಟಿಗೆ ಹಲವು ಸೌಲಭ್ಯಗಳು ಮತ್ತು ಹೊಸ ಫೀಚರ್ ಗಳನ್ನು ಘೋಷಿಸುವ ಮೂಲಕ ಬಂಪರ್ ಧಮಾಕಾ ನೀಡಿದೆ...
ಗೂಗಲ್ ಗ್ರಾಹಕರಿಗೆ ಅನೇಕ ಆಫರ್ ಗಳನ್ನು ಘೋಷಿಸಿದೆ
ಗೂಗಲ್ ಗ್ರಾಹಕರಿಗೆ ಅನೇಕ ಆಫರ್ ಗಳನ್ನು ಘೋಷಿಸಿದೆ

ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್ ಫೋನ್ ಪ್ರಿಯರ ಪಾಲಿಗೆ ಸಿಹಿ ಸುದ್ದಿ. ಗೂಗಲ್ ಒಟ್ಟೊಟ್ಟಿಗೆ ಹಲವು ಸೌಲಭ್ಯಗಳು ಮತ್ತು ಹೊಸ ಫೀಚರ್ ಗಳನ್ನು ಘೋಷಿಸುವ ಮೂಲಕ ಬಂಪರ್ ಧಮಾಕಾ ನೀಡಿದೆ.

ಗೂಗಲ್ ಐ/ಒ 2015ರ ಸಭೆಯಲ್ಲಿ ಆ್ಯಂಡ್ರಾಯ್ಡ್ ಎಂ ಎಂಬ ಹೊಸ ಓಎಸ್ ಅಪ್ ಡೇಟ್ ಹೊರತಂದಿರುವುದಲ್ಲದೆ, ಶೀಘ್ರದಲ್ಲೆ  ಗೂಗಲ್ ಮ್ಯಾಪ್ ಆ್ಯಪ್ ಮೂಲಕ ಆಫ್ ಲೈನ್ ಸರ್ಚ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದೆ.

ಏನಿದು ಗೂಗಲ್ ಮ್ಯಾಪ್ ಆ್ಯಪ್?:
ಇಷ್ಟು ದಿನ ಪ್ರಯಾಣ ದಿಕ್ಸೂಚಿಗೆ, ಮೊಬೈಲ್ ಮೂಲಕ ಜಾಗಗಳನ್ನು ಪತ್ತೆ ಮಾಡುವುದಕ್ಕೆ ಮೊಬೈಲ್ ನಲ್ಲಿ ಇಂಚರ್ನೆಟ್ ಸೌಲಭ್ಯ ಇರುವುದು ಹಾಗೂ ಡಾಟಾ ನೆಟ್ ವರ್ಕ್ ಅವಶ್ಯವಿತ್ತು. ಆಫ್ ಲೈನ್ ಸರ್ಚ್ ಸೌಲಭ್ಯದಲ್ಲಿ ಇಂಟರ್ನೆಟ್ ಇಲ್ಲದೆಯೂ ಮಾರ್ಗದರ್ಶನ ಸಿಗಲಿದೆ. ಗೂಗಲ್ ಮ್ಯಾಪ್ ಆ್ಯಪ್ ನಲ್ಲಿ ನೆಟ್ ವರ್ಕೇ ಇರದ ಜಾಗಗಳಲ್ಲಿ ಸುರಂಗ, ಕಾಡು, ವಾಯುಮಾರ್ಗಗಳಲ್ಲಿಯೂ ಹುಡುಕಾಟ ಸಾಧ್ಯವಾಗಲಿದೆ. ಆಫ್ ಲೈನ್ ಮೋಡ್ ನಲ್ಲಿಯೂ ಧ್ವನಿಯ ಮೂಲಕ ದಾರಿ ತೋರಿಸುವ ಸೌಲಭ್ಯ ಗೂಗಲ್ ಮ್ಯಾಪ್ ಆಪ್ ನೀಡಲಿದೆ.ಜಿಪಿಎಸ್ ನಿಂದ ಡಾಟಾ ಹೆಚ್ಚು ಖರ್ಚಾಗುವ ಅಪಾಯವೂ ದೂರವಾಗಲಿದೆ.

ಗೂಗಲ್ ಐ/ಒ 2015ರ ಇತರ ಕೊಡುಗೆಗಳು: ಗೂಗಲ್ ಪ್ಲೇಸಸ್ ನ ಹೊಸ ಅಪ್ಟೇಟ್ ಬಂದಿದ್ದು, ಪ್ಲೇಸ್ ಪಿಕ್ಕರ್, ಕರೆಂಟ್ ಡಿವೈಸ್ ಲೊಕೇಶನ್, ಸರ್ಚ್ ಆಟೋ ಕಂಪ್ಲೀಟ್ ಮುಂತಾದ ಆ್ಯಂಡ್ರಾಯ್ಡ್ ಗೆ ಮಾತ್ರವಿದ್ದ ಈ ಸೌಲಭ್ಯಗಳು ಐಫೋನ್ ಗಳಿಗೂ ದೊರೆಯಲಿವೆ.

ಆ್ಯಂಡ್ರಾಯ್ಡ್ ಎಂನಲ್ಲಿ 'ನವ್ ಆನ್ ಟ್ಯಾಪ್ ' ಎಂಬ ವಿಶೇಷ: ಗೂಗಲ್ ನ ಹೊಸ
ಆ್ಯಂಡ್ರಾ ಯ್ಡ್ ಅಪ್ ಡೇಟ್ ಮೂಲಕ ಸ್ಮಾರ್ಟ್ ಫೋನ್ ಇನ್ನಷ್ಟು ಆಕರ್ಷಕವಾಗಲಿದೆ. ಹೊಸ ಗೂಗಲ್ ನವ್ ಕೂಡ ಅಪ್ ಡೇಟ್ ಆಗಿದ್ದು, ಟಚ್ ಸ್ಕ್ರೀನ್ ಗಿಂತ ವೇಗವಾಗಿ ಧ್ವನಿ ಮೂಲಕವೇ ಬಹುಪಾಲು ಕೆಲಸ ಮಾಡುವ ಸೌಲಭ್ಯ ಒದಗಲಿದೆ. ನವ್ ಆನ್ ಟ್ಯಾಪ್ ಸೌಲಭ್ಯದ ಮೂಲಕ ಬಳಕೆದಾರರನ್ನು ರಿಮೈಂಡರ್ ರೀತಿಯಲ್ಲಿ ಎಚ್ಚರಗೊಳಿಸುವ ಕಾರ್ಯ ಮಾಡಲಿದೆ.

ಗೂಗಲ್ ಫೋಟೋ ಸರ್ವಿಸ್ : ಹೊಸತಾಗಿ ನೀಡಿರುವ ಗೂಗಲ್ ಫೋಟೋ ಸರ್ವಿಸ್ ನಲ್ಲಿ ಅನಿಯಮಿತ ಫೋಟೋ ಮತ್ತು ವಿಡಿಯೋಗಳನ್ನು ಆನ್ ಲೈನ್ ಸ್ಟೋರ್ ಮಾಡಿ ಇಡುವ ಸೌಲಭ್ಯ ನೀಡಿದ್ದಾರೆ. ಮೊಬೈಲ್ ನಿಂದ ತಾನಾಗಿ ಸಿಂಕ್ ಆಗುವ ವ್ಯವಸ್ಥೆಯೂ ಇದ್ದು, ಫೋಟೋಗಳ ಸೈಜ್ ಮತ್ತು ಕ್ವಾಲಿಟಿ ಕಮ್ಮಿಯಾಗದಂತೆ ಉಳಿಸಿಕೊಳ್ಳುವುದು ವಿಶೇಷ. ಇದರೊಂದಿಗೆ ಫೋಟೋ ಕೊಲ್ಯಾಜ್ ಮತ್ತು ಫೋಟೋ ಎನ್ ಹ್ಯಾನ್ಸ್ ಆಯ್ಕೆಗಳನ್ನೂ ಗೂಗಲ್ ನೀಡಿದೆ.

ಆ್ಯಕ್ಟಿವೇಶನ್ ಹೇಗೆ?: ಸ್ಮಾರ್ಟ್ ಫೋನ್ ನ ಹೋಮ್ ಬಟನ್ ಒತ್ತಿಟ್ಟುಕೊಂಡು ಓಕೆ ಗೂಗಲ್ ಅಂದರಾಯ್ತು. ನವ್ ಆನ್ ಟ್ಯಾಪ್ ಒತ್ತಿ, ಗಾಯಕ ಯಾರು ಎಂದು ಕೇಳಿದರೆ, ಕ್ಷಣಮಾತ್ರದಲ್ಲಿ ಹಾಡಿನ ಕುರಿತ ಜಾತಕವನ್ನೇ ತಂದು ನಿಮ್ಮೆದುರು ನೀಡಿಬಿಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com