
ಭುವನೇಶ್ವರ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ನ.22 ರಂದು ಸುಧಾರಿತ ವಾಯು ರಕ್ಷಣಾ(ಎಎಡಿ) ಇಂಟರ್ಸೆಪ್ಟರ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಎಎಡಿ ಇಂಟರ್ಸೆಪ್ಟರ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದೆ. ದೇಶಿಯ ನಿರ್ಮಿತ ಇಂಟರ್ಸೆಪ್ಟರ್ ಕ್ಷಿಪಣಿಯನ್ನು ಬೆಳಿಗ್ಗೆ 9 :40 ರ ವೇಳೆಗೆ ಯಶಸ್ವಿ ಪ್ರಯೋಗ ನಡೆಸಲಾಯಿತು ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರ್ಯಾಕಿಂಗ್ ರೆಡಾರ್ ನಿಂದ ಸಂಕೇತ ಪಡೆದ ನಂತರ ಒಳಬರುವ ಕ್ಷಿಪಣಿಯನ್ನು ಮಧ್ಯ ಮಾರ್ಗದಲ್ಲಿಯೇ ಹೊಡೆದುರುಳಿಸುವ ಪಥದಲ್ಲಿ ಕ್ಷಿಪಣಿ ಹಾರಾಟ ನಡೆಸಿದೆ ಎಂದು ರಕ್ಷಣಾ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ. ಕ್ಷಿಪಣಿ ಉಡಾವಣೆಯ ಪರಿಣಾಮ ಖಚಿತಪಡಿಸಿಕೊಳ್ಳುವುದಕ್ಕಾಗಿ ರಡಾರ್ ಗಳಿಂದ ಪಡೆದ ಡೇಟಾ ವಿಶ್ಲೇಷಣೆ ಮಾಡುತ್ತಿರುವುದಾಗಿ ಡಿ.ಆರ್.ಡಿ.ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement