ಫೋಬೋಸ್ ಉಪಗ್ರಹ ಸದ್ಯ ಪುಡಿ

ಮಂಗಳ ಗ್ರಹದ ಅತಿ ದೊಡ್ಡ ಉಪಗ್ರಹವಾಗಿರುವ ಫೋಬೋಸ್ ಸದ್ಯದಲ್ಲೇ ಇನ್ನಿಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಮಂಗಳ ಗ್ರಹದ ಅತಿ ದೊಡ್ಡ ಉಪಗ್ರಹವಾಗಿರುವ ಫೋಬೋಸ್ ಸದ್ಯದಲ್ಲೇ ಇನ್ನಿಲ್ಲವಾಗಲಿದೆ. 
ಮಂಗಳದತ್ತ ಮೆಲ್ಲನೆ ಉರುಳಿ ಬರುತ್ತಿರುವ ಫೋಬೋಸ್ ಹಲವು ಹೋಳುಗಳಾಗಲಿದ್ದು, ಕಾಲಾನಂತರದಲ್ಲಿ ಶನಿಗ್ರಹಕ್ಕಿರುವ ರಿಂಗ್‍ನಂತೆಯೇ ಮಂಗಳದ ಸುತ್ತವೂ ಒಂದು ಚಕ್ರ ಸೃಷ್ಟಿಯಾಗಲಿದೆಯಂತೆ. 
2 ಕೋಟಿ ಅಥವಾ 4 ಕೋಟಿ ವರ್ಷಗಳಲ್ಲಿ ಈ ಬದಲಾವಣೆ ಸಂಭವಿಸುವುದು ಎಂದು ಕ್ಯಾಲಿಫೋರ್ನಿಯ ವಿವಿಯ ವಿಜ್ಞಾನಿಗಳು ತಿಳಿಸಿದ್ದಾರೆ. 
ಈ ತಂಡದಲ್ಲಿ ತುಷಾರ್ ಮಿಟ್ಟಲï ಎಂಬ ಭಾರತೀಯ ವಿಜ್ಞಾನಿಯೂ ಇದ್ದಾರೆಂಬುದು ವಿಶೇಷ. ಮಂಗಳ ಮತ್ತು ಫೋಬೋಸ್ ನಡುವಣ ವಿಕರ್ಷಣ ಶಕ್ತಿ ಕಡಿಮೆಯಾಗುವುದೇ ಉಪಗ್ರಹದ ವಿನಾಶಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com