ನವದೆಹಲಿ: ಮಹಿಳೆಯರ ಸುರಕ್ಷೆಗಾಗಿ ಅಪಾಯ ಸೂಚಕ ಬಟನ್‌ಗಳಿರುವ ಮೊಬೈಲ್ ಫೋನ್ ತಯಾರಿಸುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೊಸತಾಗಿ ತಯಾರಿಸಲ್ಪಡುವ ಈ ಮೊಬೈಲ್ ಫೋನ್‌ಗಳಲ್ಲಿ ಅಪಾಯ ಸೂಚಕ ಬಟನ್ (panic button) ಇರುತ್ತದೆ. ಈ ಬಟನ್ ನ್ನು ಅದುಮಿದಾಗ ಇದು ಕೆಲವೊಂದು ಸಂಖ್ಯೆಗಳಿಗೆ ಸಂದೇಶವನ್ನು ಕಳುಹಿಸುವುದು ಮಾತ್ರವಲ್ಲದೆ, ಅಪಾಯಕ್ಕೆ ಸಿಲುಕಿರುವ ಮಹಿಳೆ ಯಾವ ಜಾಗದಲ್ಲಿದ್ದಾರೆ ಎಂಬ ಮಾಹಿತಿಯನ್ನೂ ನೀಡುತ್ತದೆ.
ಇಂಥಾ ಸೌಲಭ್ಯವಿರುವ ಮೊಬೈಲ್ ಫೋನ್‌ಗಳನ್ನು ತಯಾರಿಸುವಂತೆ ಕೇಂದ್ರ ಸರ್ಕಾರ ಮೊಬೈಲ್ ತಯಾರಕರಲ್ಲಿ ಪ್ರಸ್ತಾಪಿಸಿರುವುದಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.