ಪ್ಲೂಟೋ ಉಪಗ್ರಹ ಚಾರೋನ್ ನ ಫೋಟೋ ತೆಗೆದ ನ್ಯೂ ಹೊರೈಜೋನ್ ಅಂತರಿಕ್ಷ ನೌಕೆ

ಪ್ಲೂಟೋದ ಅಧ್ಯಯನ ನಡೆಸುತ್ತಿರುವ ನ್ಯೂ ಹೊರೈಜೋನ್ ಅಂತರಿಕ್ಷ ನೌಕೆ ಪ್ಲೂಟೋದ ಅತಿ ದೊಡ್ಡ ಉಪಗ್ರಹ ಚಾರೋನ್...
ನ್ಯೂ ಹೊರೈಜೋನ್ ನೌಕೆ ಸೆರೆ ಹಿಡಿದಿರುವ ಪ್ಲೂಟೋ ಉಪಗ್ರಹ ಚಾರೋನ್(ಚಿತ್ರ ಕೃಪೆ: ನಾಸಾ)
ನ್ಯೂ ಹೊರೈಜೋನ್ ನೌಕೆ ಸೆರೆ ಹಿಡಿದಿರುವ ಪ್ಲೂಟೋ ಉಪಗ್ರಹ ಚಾರೋನ್(ಚಿತ್ರ ಕೃಪೆ: ನಾಸಾ)
ವಾಷಿಂಗ್ಟನ್:  ಪ್ಲೂಟೋದ ಅಧ್ಯಯನ ನಡೆಸುತ್ತಿರುವ ನ್ಯೂ ಹೊರೈಜೋನ್ ಅಂತರಿಕ್ಷ ನೌಕೆ ಪ್ಲೂಟೋದ ಅತಿ ದೊಡ್ಡ ಉಪಗ್ರಹ ಚಾರೋನ್ ನ ಫೋಟೋವನ್ನು ಸೆರೆ ಹಿಡಿದಿದ್ದು, ಇದನ್ನು ನಾಸಾ ಬಿಡುಗಡೆ ಮಾಡಿದೆ. 
ಜುಲೈ ತಿಂಗಳಲ್ಲಿ ಪ್ಲೂಟೋ ಬಳಿ ಸಾಗಿದ ನ್ಯೂ ಹೊರೈಜೋನ್ ನೌಕೆ ಉಪಗ್ರಹ ಚಾರೋನ್ ಫೋಟೋ ತೆಗೆದಿತ್ತು. ಇದು ಹದಿನೈದು ದಿನಗಳ ಹಿಂದೆ ನಾಸಾಗೆ ತಲುಪಿದೆ. ಈ ಪೋಟೋದಲ್ಲಿ ಚಾರೋನ್ ಉಪಗ್ರಹದ ಮೇಲೆ ಭಾರೀ ಗಾತ್ರದ ಕಣಿವೆಗಳಿರುವುದು ಪತ್ತೆಯಾಗಿದೆ. ಈ ಕಣಿವೆಗಳು ಸುಮಾರು 1600 ಕಿ.ಮೀ ಅಗಲ ಹರಡಿಕೊಂಡಿದೆ ಎಂದು ನಾಸಾ ಹೇಳಿದೆ. 
ಪ್ರಸ್ತುತ ನ್ಯೂ ಹೊರೈಜೋನ್ ನೌಕೆ ಪ್ಲೂಟೋ ವನ್ನು ದಾಟಿ  500 ಕೋಟಿ ಕಿ.ಮೀ. ದೂರದಲ್ಲಿದ್ದು, ತಾನು ಸೆರೆ ಹಿಡಿಯುತ್ತಿರುವ ಫೋಟಗಳನ್ನು ಕಳುಹಿಸುತ್ತಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com