ಪ್ಲುಟೋ ಉಪಗ್ರಹ ಖೇರೋನ್ ಹೇಗಿದೆ?

ಪ್ಲುಟೋ ಮತ್ತು ಖೇರೋನ್‌ನ ಕಲರ್ ಚಿತ್ರಗಳನ್ನು ಹೋಲಿಸಿ ನೋಡಿದರೆ ಇವುಗಳೆರಡ ಮೇಲ್ಮೈಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು...
ಖೇರೋನ್
ಖೇರೋನ್
ವಾಷಿಂಗ್ಟನ್: ಕುಬ್ಜ ಗ್ರಹ ಪ್ಲುಟೋದ ಉಪಗ್ರಹ ಖೇರೋನ್ (CHARON ). ಖೇರೋನ್ ನ ಗಾತ್ರ ಪ್ಲುಟೋದ ಅರ್ಧದಷ್ಟೇ. ಇದೀಗ ನ್ಯೂ ಹೊರೈಜಾನ್ ಅಂತರಿಕ್ಷ ನೌಕೆ ಖೇರೋನ್‌ನ ಫೋಟೋಗಳನ್ನು ತೆಗೆದು ಕಳುಹಿಸುವ ಮೂಲಕ ಈ ಗ್ರಹ ಹೇಗಿದೆ ಎಂಬುದು ಅರಿವಿಗೆ ನಿಲುಕಿದೆ.
ಖೇರೋನ್ ಹೇಗಿದೆ?
ನ್ಯೂ ಹೊರೈಜಾನ್ ಕಳುಹಿಸಿರುವ ನೀಲಿ, ಕೆಂಪು, ಇನ್‌ಫ್ರಾರೆಡ್ ಇಮೇಜ್‌ಗಳನ್ನು ನೋಡಿದರೆ ಸುಮಾರು 1600 ಕಿಮೀನಷ್ಟಿರುವ ಪರ್ವತ ಶ್ರೇಣಿಗಳಂತಿರುವ ಮೇಲ್ಮೈಯನ್ನು ಖೇರೋನ್‌ನಲ್ಲಿ ಕಾಣಬಹುದಾಗಿದೆ.
ಪ್ಲುಟೋ ಮತ್ತು ಖೇರೋನ್‌ನ ಕಲರ್ ಚಿತ್ರಗಳನ್ನು ಹೋಲಿಸಿ ನೋಡಿದರೆ ಇವುಗಳೆರಡ ಮೇಲ್ಮೈಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಅದೇ ವೇಳೆ ಕೆಲವೊಂದು ಸಾಮ್ಯತೆಗಳೂ ಇದರಲ್ಲಿವೆ. ಪ್ಲುಟೋದ ಮಧ್ಯರೇಖೆಯ ಬಳಿಯಿರುವ ಕೆಂಪು ಪ್ರದೇಶದಂತಿರುವ ಪ್ರದೇಶವನ್ನು ನಾವು ಖೇರೋನ್ ನ ಉತ್ತರ ಧ್ರುವದಲ್ಲಿ ಕಾಣಬಹುದು. ಅದೇ ವೇಳೆ ಮಂಗಳಲ್ಲಿರುವ ಪರ್ವತಾಕೃತಿಗಳಂತಿರುವ ಆಕೃತಿಗಳನ್ನು ಖೇರೋನ್ ನಲ್ಲಿ ಕಾಣಬಹುದು. 
ಕೌತುಕ ಹುಟ್ಟಿಸಿದ ಖೇರೋನ್
ಅಗ್ನಿ ಪರ್ವತಗಳಿಂದ ಕೂಡಿದ್ದರೂ ಶಾಂತವಾಗಿರುವ ಉಪಗ್ರಹ ಖೇರೋನ್ ಎಂಬ ಊಹೆ ವಿಜ್ಞಾನಿಗಳಿಗಿತ್ತು. ಆದರೆ ಫೋಟೋ ನೋಡಿದ ನಂತರ ಪರ್ವತಗಳು, ಏರು ತಗ್ಗುಗಳಿಂದ ಕೂಡಿದ ಮೇಲ್ಮೈ ಇರುವ ಉಪಗ್ರಹ ಇದು ಎಂದು ವಿಜ್ಞಾನಿಗಳಿಗೆ ಹೇಳಿದ್ದಾರೆ.
ಪ್ಲುಟೋಗಿರುವ ನಾಲ್ಕು ಉಪಗ್ರಹಗಳಲ್ಲಿ ಒಂದಾಗಿರುವ ಖೇರೋನ್‌ನ ವಿಸ್ತೀರ್ಣ 1214 ಕಿ.ಮೀ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com