ಕಜಿತಾ, ಅರ್ಥರ್‍ಗೆ ಭೌತ ನೊಬೆಲ್

ಜಪಾನ್‍ನ ತಕಾಕಿ ಕಜಿತಾ ಮತ್ತು ಕೆನಡಾದ ಆರ್ಥರ್ ಮೆಕ್ಡೊನಾಲ್ಡ್ ಅವರು ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ...
ತಕಾಕಿ ಕಜಿತಾ, ಆರ್ಥರ್ ಮೆಕ್ಡೊನಾಲ್ಡ್
ತಕಾಕಿ ಕಜಿತಾ, ಆರ್ಥರ್ ಮೆಕ್ಡೊನಾಲ್ಡ್
ಸ್ಟಾಕ್ಹೋಂ: ಜಪಾನ್‍ನ ತಕಾಕಿ ಕಜಿತಾ ಮತ್ತು ಕೆನಡಾದ ಆರ್ಥರ್ ಮೆಕ್ಡೊನಾಲ್ಡ್ ಅವರು ಪ್ರಸಕ್ತ ವರ್ಷದ ಭೌತ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ. ಉಪ ಪರಮಾಣುವಿನ ಕಣದ ಅನಿಶ್ಚಿತತೆ (ನ್ಯೂಟ್ರಿನೋ ಆಸಿಲೇಷನ್ )ಯನ್ನು ಪತ್ತೆಹಚ್ಚುವ ಮೂಲಕ ನ್ಯೂಟ್ರಿ ನೋಗೂ ದ್ರವ್ಯರಾಶಿ ಇದೆ ಎಂಬುದನ್ನು ಇವರು ಕಂಡುಕೊಂಡಿದ್ದಾರೆ. ಅಲ್ಲದೆ, ನ್ಯೂಟ್ರಿನೋಗಳೂ ತಮ್ಮ ಐಡೆಂಟಿಟಿಯನ್ನು ಬದಲಾಯಿಸುತ್ತಿರುತ್ತವೆ ಎಂಬುದನ್ನೂ ಸಾಬೀತು ಪಡಿಸಿದ್ದಾರೆ. ಈ ಸಂಶೋಧ ನೆಯು ಜಗತ್ತಿನ ಬಗೆಗಿನ ನಮ್ಮ ದೃಷ್ಟಿಕೋನ ವನ್ನೂ ಬದಲಾಯಿಸಿದೆ. ಈ ಇಬ್ಬರು ಭೌತ ಶಾಸ್ತ್ರಜ್ಞರ ಕೊಡುಗೆಯನ್ನು ಪರಿಗಣಿಸಿ ಈ ಬಾರಿಯ ನೊಬೆಲ್ ಘೋಷಿಸಲಾಗಿದೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com