
ಲಾತೂರು: ವಾಟ್ಸ್‌ಆಪ್‌ನಲ್ಲಿ ಆಕ್ಷೇಪಾರ್ಹ ವಿಷಯ ಪ್ರಕಟವಾದ ಹಿನ್ನೆಲೆಯಲ್ಲಿ ಲಾತೂರು ಜಿಲ್ಲೆಯಲ್ಲಿ ವಾಟ್ಸ್‌ಆಪ್ ಆಡಳಿತಾಧಿಕಾರಿಯನ್ನು (ಅಡ್ಮಿನ್) ಗುರುವಾರ ಬಂಧಿಸಲಾಗಿದೆ.
ವಾಟ್ಸ್‌ಆಪ್‌ನಲ್ಲಿ ಆಕ್ಷೇಪಾರ್ಹ ವಿಷಯ ಹಾಗೂ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಮರಾಠವಾಡದ ಲಾತೂರು ಜಿಲ್ಲೆಯ ಚಕ್ಕೂರ್ ತೆಹ್ಸಿಲ್ ಪೊಲೀಸರು ಗ್ರೂಪ್‌ನ ಆಡಳಿತಾಧಿಕಾರಿ ಹಾಗೂ ಇತರೆ ಮೂವರನ್ನು ಬಂಧಿಸಿದ್ದಾರೆ.
ವಾಟ್ಸ್‌ಆಪ್ ಗ್ರೂಪ್‌ನ ಶಿವಾಜಿ ಬರ್ಚೆ, ರಾಜ್‌ಕುಮಾರ್ ತೆಲಂಗೆ, ಅಮೊಲ್ ಸೋಮವಂಶಿ ಮತ್ತು ಮನೋಜ್ ಲವ್ರಲೆ ಎಂಬುವವರನ್ನು ಬಂಧಿಸಲಾಗಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ ಎಂದು ಚಕ್ಕೂರ್ ಠಾಣೆಯ ಪೊಲೀಸ್ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ನಾಲ್ವರು ಆರೋಪಿಗಳ ವಿರುದ್ಧ ಸೆಕ್ಷನ್ 153, 34, ಹಾಗೂ ಸೆಕ್ಷನ್ 67ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement