ಈ ವ್ಯವಸ್ಥೆ ಮೂಲಕ, ಜಿಪಿಎಸ್ ಸಿಗ್ನಲ್ ಆಧರಿಸಿ ಇಡೀ ದೇಶಾದ್ಯಂತ ಯಾವ ವಾಹನ ಎಲ್ಲಿದೆ ಎಂಬ ನಿಖರ ಮಾಹಿತಿ ಪಡೆಯಲು ಸಾಧ್ಯ. ಇದು ಕೇವಲ ವೈಮಾನಿಕ ಕ್ಷೇತ್ರವಷ್ಟೇ ಅಲ್ಲ, ಟ್ಯಾಕ್ಸಿ, ಬಸ್, ವ್ಯಕ್ತಿ ಸೇರಿದಂತೆ ಜಿಪಿಎಸ್ ಹೊಂದಿರುವ ಪ್ರತಿಯೊಂದು ವಾಹನ, ವ್ಯಕ್ತಿಯ ಭೌಗೋಳಿಕ ಸ್ಥಾನದ ವಿವರವನ್ನು 20 ಮೀಟರ್ ವ್ಯಾಪ್ತಿಯ ನಿಖರತೆಯೊಂದಿಗೆ ನೀಡಲಿದೆ. ಶೈಕ್ಷಣಿಕ, ಕೈಗಾರಿಕೆ ಸೇರಿದಂತೆ ಒಟ್ಟು 28 ಕ್ಷೇತ್ರ ಗಳಲ್ಲಿ ಈ ಮಾಹಿತಿ ಉಪಯುಕ್ತವಾಗಲಿದೆ ಎಂದರು.