ಸ್ಪರ್ಷ ಸಂವೇದನೆ ಗುರುತಿಸಬಲ್ಲ ಕೃತಕ ಚರ್ಮ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು!

ಸಂವೇದನಾ ಸಂಕೇತಗಳನ್ನು ಮೆದುಳಿಗೆ ತಲುಪಿಸುವ ಸಾಮರ್ಥ್ಯವುಳ್ಳ ಕೃತಕ ಚರ್ಮವನ್ನು ರೂಪಿಸಿರುವುದಾಗಿ ಅಮೆರಿಕದ ಸಂಶೋಧಕರು ಹೇಳಿದ್ದಾರೆ.
ಕೃತಕ ಚರ್ಮ(ಸಾಂಕೇತಿಕ ಚಿತ್ರ)
ಕೃತಕ ಚರ್ಮ(ಸಾಂಕೇತಿಕ ಚಿತ್ರ)

ವಾಷಿಂಗ್ಟನ್: ಸಂವೇದನಾ ಸಂಕೇತಗಳನ್ನು ಮೆದುಳಿಗೆ ತಲುಪಿಸುವ ಸಾಮರ್ಥ್ಯವುಳ್ಳ ಕೃತಕ ಚರ್ಮವನ್ನು ರೂಪಿಸಿರುವುದಾಗಿ ಅಮೆರಿಕದ ಸಂಶೋಧಕರು ಹೇಳಿದ್ದಾರೆ.
ಕೃತಕ ತ್ವಚೆ ಹಸ್ತ ಲಾಘವ ಹಾಗೂ ಬಲವಾದ ಹಿಡಿತದ ವೇಳೆ ಉಂಟಾಗುವ ಒತ್ತಡದ ನಡುವಿನ ವ್ಯತ್ಯಾಸವನ್ನು ಗುರುತಿಸುವಷ್ಟು ಸಮರ್ಥವಾಗಿದೆ. ಕೃತಕ ಅಂಗಾಂಗಳನ್ನು ಹೊಂದಿರುವವರು ಕೃತಕ ಚರ್ಮದಿಂದ ಸಂವೇದನೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಕ್ಕೆ ಸಂಬಂಧಿಸಿದ ಅಮೆರಿಕದ ನಿಯತಕಾಲಿಕ ವರದಿ ಮಾಡಿದೆ.
ಇದೇ ಮೊದಲ ಬಾರಿಗೆ ನರಮಂಡಲದ ಘಟಕಕ್ಕೆ ಸ್ಪರ್ಷ ಸಂವೇದನೆ ನೀಡುವಂತೆ ತ್ವಚೆಯ ಮಾದರಿಯ ವಸ್ತುವನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಸಾಧನೆ ಹಿಂದೆ 17 ಸದಸ್ಯರ ಸಂಶೋಧನಾ ತಂಡದ ಶ್ರಮವಿದೆ ಎಂದು
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ  ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜ್ಹೆನಾನ್ ಬಾವ್ ಹೇಳಿದ್ದಾರೆ.
ಎರಡು ಪದರಗಳಲ್ಲಿ ರಚನೆಯಾಗಿರುವ ಕೃತಕ ಚರ್ಮದಲ್ಲಿ ಮೊದಲ ಪದರ ಸಂವೇದಿ ವ್ಯವಸ್ಥೆಯನ್ನು ಹೊಂದಿದ್ದರೆ, ಎರಡನೆಯ ಪದರ  ವಿದ್ಯುತ್ ಸಂಕೇತಗಳನ್ನು ನರ ಕೋಶಗಳಿಗೆ ಹೊಂದಬಲ್ಲ ಜೀವರಾಸಾಯನಿಕ ಪ್ರಚೋದಕಗಳನ್ನಾಗಿ ಪರಿವರ್ತಿಸಲು ಸರ್ಕ್ಯೂಟ್ ನಂತೆ ಕಾರ್ಯನಿರ್ವಹಿಸಲಿದೆ.
ಎಲೆಕ್ಟ್ರಾನಿಕ್ ಸಂಕೇತಳು ಜೈವಿಕ ನರಕೋಶದಿಂದ ಗುರುತಿಸಲ್ಪಡುತ್ತದೆ ಎಂಬುದನ್ನು ನಿರೂಪಿಸುವುದು ವಿಜ್ಞಾನಿಗಳ ಮುಂದಿರುವ ದೊಡ್ಡ ಸವಾಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com