ಸ್ಯಾನ್ ಡಿಸ್ಕ್ ನ್ನು ಖರೀದಿಸಲಿರುವ ವೆಸ್ಟ್ರನ್ ಡಿಜಿಟಲ್

ಹಾರ್ಡ್ ಡಿಸ್ಕ್ ಡ್ರೈವ್ ಉತ್ಪಾದಕ ವೆಸ್ಟ್ರನ್ ಡಿಜಿಟಲ್ ಸ್ಯಾನ್ ಡಿಸ್ಕ್ ಕಾರ್ಪ್ ನ್ನು 19 ಬಿಲಿಯನ್ ಡಾಲರ್ ಗೆ ಖರೀದಿಸಲಿದೆ.
ಸ್ಯಾನ್ ಡಿಸ್ಕ್(ಸಂಗ್ರಹ ಚಿತ್ರ)
ಸ್ಯಾನ್ ಡಿಸ್ಕ್(ಸಂಗ್ರಹ ಚಿತ್ರ)

ಹಾರ್ಡ್ ಡಿಸ್ಕ್ ಡ್ರೈವ್ ಉತ್ಪಾದಕ ವೆಸ್ಟ್ರನ್ ಡಿಜಿಟಲ್ ಸ್ಯಾನ್ ಡಿಸ್ಕ್ ಕಾರ್ಪ್ ನ್ನು 19 ಬಿಲಿಯನ್ ಡಾಲರ್ ಗೆ ಖರೀದಿಸುವುದಾಗಿ ತಿಳಿಸಿದ್ದು ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗುವ ಫ್ಲಾಶ್ ಮೆಮೊರಿ ಸ್ಟೋರೇಜ್ ಚಿಪ್ ಗಳಿಗೆ ಉತ್ತಮ ಪ್ರವೇಶ ನೀಡುವುದಾಗಿ ಹೇಳಿದೆ. 
ಸ್ಯಾನ್ ಡಿಸ್ಕ್ ನ ಷೇರುಗಳು 78 .95 ಡಾಲರ್ ಗಳಿಗೆ ಏರಿಕೆಯಾಗಿದೆ. ಅಗ್ಗದ ಚಿಪ್ ಗಳು ಹಾಗೂ ಇಂಟರ್ ನೆಟ್ ಗಾಗಿ ಬಳಸುವ ಗ್ಯಾಟ್ಜೆಟ್ ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ಯಾನ್ ಡಿಸ್ಕ್ ಪ್ರಸಕ್ತ ವರ್ಷ ಅತಿ ಹೆಚ್ಚಿನ ಒಪ್ಪಂದಗಳನ್ನು ಮಾಡಿಕೊಂಡಿದೆ.
ವೆಸ್ಟ್ರನ್ ಡಿಜಿಟಲ್ ನಲ್ಲಿ  ಚೀನಾದ ಸರ್ಕಾರಿ ಸ್ವಾಮ್ಯದ ಸಿಂಘುವಾ ಹೋಲ್ಡಿಂಗ್ಸ್ ನ ಯೂನಿ ಸ್ಪ್ಲೆಂಡರ್ ನ ಹೂಡಿಕೆಯ ಮೇಲೆ ಸ್ಯಾನ್ ಡಿಸ್ಕ್ ನ ಸ್ವಾಧೀನತೆಯ ಮೌಲ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ. ಸ್ಯಾನ್ ಡಿಸ್ಕ್ ಸ್ವಾಧೀನಕ್ಕೂ ಮುನ್ನವೇ ಯೂನಿ ಸ್ಪ್ಲೆಂಡರ್ ನ ಹೂಡಿಕೆ ಮುಕ್ತಾಯಗೊಂಡರೆ ವೆಸ್ಟ್ರನ್ ಡಿಜಿಟಲ್ ಪ್ರತಿ ಷೇರಿಗೆ 85 .10 ಡಾಲರ್ ನಗದು ನೀಡಲಿದೆ. ಹೂಡಿಕೆ ಕೊನೆಯಾಗದೆ ಇದ್ದಲ್ಲಿ ಅಥವಾ ರದ್ದುಗೊಂಡರೆ ಪ್ರತಿ ಷೇರಿಗೆ 67 .50 ಡಾಲರ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com