ಕ್ಯಾನ್ಸರ್ ನ್ನು ಮತ್ತಷ್ಟು ನಿಖರವಾಗಿ ಪತ್ತೆಹಚ್ಚಲಿದೆ ಆನ್ ಲೈನ್ ಆಪ್!

ಕ್ಯಾನ್ಸರ್ ಕಾಯಿಲೆಯನ್ನು ಪತ್ತೆಹಚ್ಚಲು ನೆರವಾಗುವ ಆನ್ ಲೈನ್ ಆಪ್ ನ್ನು ವಿಜ್ಞಾನಿಗಳು ತಯಾರಿಸಿದ್ದಾರೆ.
ಕ್ಯಾನ್ಸರ್ ನ್ನು ಮತ್ತಷ್ಟು ನಿಖರವಾಗಿ ಪತ್ತೆಹಚ್ಚಲಿದೆ ಆನ್ ಲೈನ್ ಆಪ್!

ನ್ಯೂಯಾರ್ಕ್: ಕ್ಯಾನ್ಸರ್ ಕಾಯಿಲೆಯನ್ನು ಪತ್ತೆಹಚ್ಚಲು ನೆರವಾಗುವ ಆನ್ ಲೈನ್ ಆಪ್ ನ್ನು ವಿಜ್ಞಾನಿಗಳು ತಯಾರಿಸಿದ್ದಾರೆ.  

ಆನ್ ಲೈನ್ ಆಪ್ ಉಚಿತವಾಗಿ ಸಿಗಲಿದ್ದು, ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಮಾಡುವುದಕ್ಕೆ ವೈದ್ಯರಿಗೆ ಈ ಆಪ್ ಸಹಾಯಕಾರಿಯಾಗಲಿದ್ದು, ಚಿಕಿತ್ಸೆಯನ್ನು ಮತ್ತಷ್ಟು ಸುಧಾರಿಸಲು ನೆರವಾಗುತ್ತದೆ. ಪ್ರತಿಯೊಂದು ಕ್ಯಾನ್ಸರ್ ಜೀವಕೋಶಗಳು ಅನುವಂಶೀವವಾಗಿ ವಿವಿಧ ರೂಪಾಂತರಗಳನ್ನು ಹೊಂದುತ್ತವೆ.  ಈ ಬದಲಾವಣೆಯ ಬಗ್ಗೆ ವಿಜಾನಿಗಳು ತಯಾರಿಸಿರುವ ಆಪ್ ನಿಂದ ಸ್ಪಷ್ಟ ಮಾಹಿತಿ ಪಡೆಯಬಹುದಾಗಿದ್ದು  ನಿರ್ದಿಷ್ಟ ಚಿಕಿತ್ಸೆ ಸೂಚಿಸಲು ಸಾಧ್ಯವಾಗಲಿದೆ.

ಸಾಮಾನ್ಯವಾಗಿ ಕ್ಯಾನ್ಸರ್ ಗೆ ತುತ್ತಾಗಿರುವ ಪ್ರತಿಯೊಂದು ಜೀವಕೋಶವು ಒಂದೇ ರೀತಿ ಇರುತ್ತದೆ ಎಂದು ತಿಳಿಯಲಾಗುತ್ತೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಪ್ರತಿಯೊಂದು ಜೀವಕೋಶದಲ್ಲಿಯೂ ವ್ಯತ್ಯಾಸಗಳಿರುತ್ತವೆ. ವಿಜ್ಞಾನಿಗಳು ತಯಾರಿಸಿರುವ ಆಪ್ ನಿಂದಾಗಿ ಪ್ರತಿಯೊಂದು ಜೀವಕೋಶಗಳ ಬಗ್ಗೆಯೂ ನಿಖರ ಮಾಹಿತಿ ದೊರೆಯುತ್ತದೆ. ಇದರಿಂದ ಮತ್ತಷ್ಟು ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯ ಎಂದು ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬರೇಟರಿಯ ಪ್ರಾಧ್ಯಾಪಕ  ಮೈಕೆಲ್ ಸ್ಕಾಟ್ಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com