ಭಾರತ ಸರ್ಕಾರದಿಂದ ಹೊಸ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ

ಭಾರತ ಸರ್ಕಾರ ಹೊಸ ಆಪರೇಟಿಂಗ್ ಸಿಸ್ಟಮ್ ನ್ನು ಬಿಡುಗಡೆ ಮಾಡಲಿದೆ.
ಭಾರತ ಸರ್ಕಾರದ ಆಪರೇಟಿಂಗ್ ಸಿಸ್ಟಮ್
ಭಾರತ ಸರ್ಕಾರದ ಆಪರೇಟಿಂಗ್ ಸಿಸ್ಟಮ್

ನವದೆಹಲಿ: ಭಾರತ ಸರ್ಕಾರ ಹೊಸ ಆಪರೇಟಿಂಗ್ ಸಿಸ್ಟಮ್ ನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ. ಆಪರೇಟಿಂಗ್ ಸಿಸ್ಟಂ ಗೆ ಭಾರತ್ ಆಪರೇಟಿಂಗ್ ಸಿಸ್ಟಂ ಸಲ್ಯೂಷನ್ಸ್ ಅಥವಾ ಬಿಒಎಸ್ಎಸ್(ಬಾಸ್) ಎಂದು ಹೆಸರಿಡಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಮೈಕ್ರೋಸಾಫ್ಟ್ ವಿಂಡೊಸ್ ಆಪರೇಟಿಂಗ್ ಸಿಸ್ಟಂ ಬದಲಿಗೆ ಬಳಕೆ ಮಾಡುವುದಕ್ಕಾಗಿ ಭಾರತ ಸರ್ಕಾರ ತನ್ನದೇ ಆದ ಆಪರೇಟಿಂಗ್ ಸಿಸ್ಟಂ ನ್ನು ಬಿಡುಗಡೆ ಮಾಡಲಿದೆ. ಹೊಸ ಒ.ಎಸ್ ನ್ನು ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ.

ಭಾರತ್ ಆಪರೇಟಿಂಗ್ ಸಿಸ್ಟಂ ಲೈನಕ್ಸ್ ಆಧಾರಿತವಾಗಿದ್ದು ಗುಜರಾತ್  ತಾಂತ್ರಿಕ ವಿಶ್ವವಿದ್ಯಾನಿಲಯ, ಡಿಆರ್.ಡಿ.ಒ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2013 ರಲ್ಲಿ ಬಾಸ್ ನ್ನು ಅಭಿವೃದ್ಧಿಪಡಿಸಲಾಗಿತ್ತು.   ಹಲವು ಬದಲಾವಣೆಗಳೊಂದಿಗೆ ಈಗ ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com