ಪಿಎಸ್ಎಲ್ ವಿ-ಸಿ30 ಉಪಗ್ರಹ ಉಡಾವಣೆಗೆ ಕ್ಷಣಗಣನೆ

ಆಕಾಶಕಾಯಗಳ ಅಧ್ಯಯನಕ್ಕಾಗಿ ಮೀಸಲಾಗಿರುವ ಬಹುನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆಗೆ ಇಸ್ರೋ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆಕಾಶಕಾಯಗಳ ಅಧ್ಯಯನಕ್ಕಾಗಿ ಮೀಸಲಾಗಿರುವ ಬಹುನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆಗೆ ಇಸ್ರೋ ಸರ್ವಸನ್ನದ್ಧವಾಗಿದೆ.

ಸೆ.28ರ ಉಡಾವಣೆಗೆ 50 ಗಂಟೆಗಳ ಕೌಂಟ್‍ಡೌನ್ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಇದು ದೇಶದ ಪ್ರಪ್ರಥಮ ಖಗೋಳ ಯೋಜನೆ ಉಪಗ್ರಹವಾಗಲಿದೆ.

ಪಿಎಸ್ಎಲ್ವಿ-ಸಿ30 ಉಡಾವಣಾ ವಾಹನ ಆಸ್ಟ್ರೋಸ್ಯಾಟ್‍ನೊಂದಿಗೆ ಇನ್ನೂ 6 ಉಪಗ್ರಹಗಳನ್ನು ಹೊತ್ತೊಯ್ಯಲು ಸಿದ್ಧವಾಗಿದೆ.

ಇಂಡೋನೇಷ್ಯಾ ಮತ್ತು ಕೆನಡಾದ ತಲಾ ಒಂದೊಂದು ಉಪಗ್ರಹಗಳು, ಅಮೆರಿಕದ 4 ನ್ಯಾನೋ ಉಪಗ್ರಹಗಳು ಬಾಹ್ಯಾಕಾಶ ತಲುಪಲಿದ್ದು, ಆಂಧ್ರದ  ಹರಿಕೋಟಾದಿಂದ 28ರ ಬೆ.10 ಗಂಟೆಗೆ ಉಡಾವಣೆ ಮಾಡಲಾಗುವುದೆಂದು ಇಸ್ರೋ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com