
ಶ್ರೀಹರಿಕೋಟಾ: ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿ ಇರಿಸಲಾಗಿರುವ ದೇಶದ ಮೊದಲ ಉಪಗ್ರಹ ಆಸ್ಟ್ರೋಸ್ಯಾಟ್ ನ್ನು ಸೋಮವಾರ ಉಡಾವಣೆ ಮಾಡಾಲಾಗಿದೆ.
ಬಾಹ್ಯಾಕಾಶ ಸಂಶೋಧನೆಗೆ ಪೂರಕವಾಗಿರುವ ಈ ಉಪಗ್ರಹ ಸೋಮವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಛಿಮ್ಮಿದೆ. ಇದರಿಂದಾಗಿ ಆಕಾಶಕಾಯಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ಭಾರತಕ್ಕೆವಿಶೇಷ ಅವಕಾಶ ಸಿಕ್ಕಿದಂತಾಗಿದೆ.
ಪಿಎಸ್ ಎಲ್ ವಿ -30 ರಾಕೆಟ್ ನಲ್ಲಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಆಸ್ಟ್ರೋಸ್ಯಾಟ್ ಮಹತ್ವದ ಉಪಗ್ರಹವನ್ನು ಉಡಾವಣೆ ಮಾಡಿದೆ.
1513 ಕೆಜಿ ತೂಕದ ಆಸ್ಟ್ರೋಸ್ಯಾಟ್ ನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿಯೇ ರೂಪಿಸಲಾಗಿದ್ದು, ಈ ಹಿಂದಿನ ಆಸ್ಟ್ರೋಸ್ಯಾಟ್ ಉಪಗ್ರಹಗಿಂತ ಈ ಉಪಗ್ರಹದಲ್ಲಿ ಹೆಚ್ಚಿನ ಸುಧಾರಣೆ ಮಾಡಲಾಗಿದೆ.
ಐದು ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದ್ದು, ಭೂಮಿಯಿಂದ 50 ಕಿ.ಮೀ ದೂರದಲ್ಲಿ ನೆಲಗೊಳ್ಳಲಿದೆ. ಸೌರ್ಯವ್ಯೂಹದಲ್ಲಿನ ಕಪ್ಪು ಚುಕ್ಕೆಗಳು, ನಕ್ಷತ್ರ ಪುಂಜ ಮತ್ತು ಅಲ್ಲಿನ ಶಕ್ತಿ ಕೇಂದ್ರ ಅಧ್ಯಯನಕ್ಕೆ ರೂಪಿಸಲಾಗಿರುವ ಆಸ್ಟ್ರೋಸ್ಯಾಟ್ ಉಪಗ್ರಹ ಭಾರತದ ಬಾಹ್ಯಕಾಶ ಅಧ್ಯಯನಕ್ಕೆ ಮಹತ್ವದ ಉಪಗ್ರಹವಾಗಲಿದೆ. ಇನ್ನು ಪಿಎಸ್ ಎಲ್ ವಿ-30 ಸ್ಯಾಟಲೈಟ್ ನಲ್ಲಿ ಭಾರತದ ಆಸ್ಟ್ರೋಸ್ಯಾಟ್ ಉಪಗ್ರಹ ಜೊತೆಗೆ ಇನ್ನು 6 ವಿದೇಶ ಉಪಗ್ರಹಗಳು ಉಡಾವಣೆಯಾಗಿದೆ.
ಇಂದು ಬೆಳಿಗ್ಗೆ ಉಡಾವಣೆಯಾಗಿದ್ದು, ಇದರಿಂದಾಗಿ ಇದುವರೆಗೆ ಬಾಹ್ಯಾಕಾಶ ಸಂಸ್ಥೆಆಗಸಕ್ಕೆ ಕಳುಹಿಸಿದ ವಿದೇಶಿ ಉಪಗ್ರಹಗಳ ಸಂಖ್ಯೆ50 ಆಗಿದೆ. ಕೆನಡಾ ಮತ್ತು ಇಂಡೋನೇಷ್ಯಾದಸಣ್ಣ ಉಪಗ್ರಹಗಳೂ ಕಕ್ಷೆಗೆ ಸೇರಲಿವೆ.
Advertisement