ಆರ್ಯಭಟ್ಟ ಮತ್ತು ಇತರ ಭಾರತೀಯ ಗಣಿತಶಾಸ್ತ್ರಜ್ಞರಿಗೆ ಗೌರವ ಸಲ್ಲಿಸಿದ ಯುನೆಸ್ಕೋ

ಭಾರತ ಅತಿ ದೊಡ್ಡ ಬದಲಾವಣೆಯ ಕವಲಿನಲ್ಲಿದೆ ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅವರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪ್ಯಾರಿಸ್: ಭಾರತ ಅತಿ ದೊಡ್ಡ ಬದಲಾವಣೆಯ ಕವಲಿನಲ್ಲಿದೆ ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅವರು ಯುನೆಸ್ಕೋದ ಅಧ್ಯಕ್ಷ ಇರಿನಾ ಬೋಕೋವಾ ಅವರೊಂದಿಗೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಭಾರತೀಯ ಗಣಿತಜ್ಞ-ಖಗೋಳಶಾಸ್ತ್ರಜ್ಞ ಆರ್ಯಭಟ್ಟ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.

"ಭಾರತ ಅತಿ ದೊಡ್ಡ ಬದಲಾವಣೆಯ ಕವಲಿನಲ್ಲಿದೆ. ವಿಶ್ವದಲ್ಲೇ ಅತಿ ದೊಡ್ಡ, ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಸರ್ಕಾರ ಹಮ್ಮಿಕೊಂಡಿದೆ. ಇದು ಭಾರತದ ಮೂಲೆಮೂಲೆಗೂ ಶಿಕ್ಷಣ ಮತ್ತು ಕೌಶಲ್ಯವನ್ನು ಕೊಂಡೊಯ್ಯಲಿದೆ.

ಎಲ್ಲ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಮತ್ತು ವಿಕಲಾಂಗ ಚೇತನರು ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಅರಿಯಲು ಅಗತ್ಯ ಅವಕಾಶ ನೀಡುವುದು ಮತ್ತು ಈ ಕ್ಷೇತ್ರಗಳಲ್ಲಿ ಅವರಿಗೆ ಉನ್ನತ ಅಧ್ಯಯನ ನಡೆಸಲು ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ" ಎಂದು ಇರಾನಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ೨೦೧೪ರಲ್ಲಿ ಅಧಿಕಾರ ಸ್ವೀಕರಿಸಿದಾಗಿಲಿಂದಲೂ ನಮ್ಮ ಸರ್ಕಾರ ಈ ವಿಷಯಗಳಿಗೆ ಒತ್ತು ನೀಡುತ್ತಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಗಣಿತಜ್ಞ ಆರ್ಯಭಟ್ಟ ಮತ್ತು ಇತರರ ಸಾಧನೆಯನ್ನು ಬಣ್ಣಿಸಿರುವ ಬೋಕೋವಾ, ಇವರ ಸಾಧನೆಗಳಿಂದಲೇ ಮನುಕುಲಕ್ಕೆ ಗೊತ್ತಿರುವ ಜಾಗತಿಕ ಗಣಿತ ರೂಪುಗೊಂಡಿರುವುದು ಎಂದಿದ್ದಾರೆ.

'ಸೊನ್ನೆಯ ಮೇಲೆ ಅಂತರಾಷ್ಟ್ರೀಯ ಸಮಾವೇಶ'ವನ್ನು ಯುನೆಸ್ಕೋ ಮತ್ತು ಭಾರತದ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿತ್ತು.

ಇದೇ ಸಂದರ್ಭದಲ್ಲಿ ಭಾರತ ಮೂಲದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಂಜುಳ್ ಭಾರ್ಗವ ಕೂಡ ಗಣಿತ ಶಾಸ್ತ್ರಕ್ಕೆ ಭಾರತದ ಕೊಡುಗೆಯ ಬಗ್ಗೆ ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com