ಹೆಚ್ ಪಿಯಿಂದ ವಿಶ್ವದ ಅತ್ಯಂತ ತೆಳುವಾದ ಲ್ಯಾಪ್ ಟಾಪ್ ಬಿಡುಗಡೆ

ಪ್ರಿಂಟಿಂಗ್ ಹಾಗೂ ಕಂಪ್ಯೂಟರ್ ಉತ್ಪಾದಕ ಹೆಚ್ ಪಿ ಸಂಸ್ಥೆ ಏ.7 ರಂದು ವಿಶ್ವದ ಅತಿ ತೆಳುವಾದ ಲ್ಯಾಪ್ ಟಾಪ್ ನ್ನು ಬಿಡುಗಡೆಗೊಳಿಸಿದೆ.
ವಿಶ್ವದ ಅತ್ಯಂತ ತೆಳುವಾದ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ಹೆಚ್ ಪಿ
ವಿಶ್ವದ ಅತ್ಯಂತ ತೆಳುವಾದ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ಹೆಚ್ ಪಿ

ಮಕಾವೊ: ಪ್ರಿಂಟಿಂಗ್ ಹಾಗೂ ಕಂಪ್ಯೂಟರ್ ಉತ್ಪಾದಕ ಹೆಚ್ ಪಿ ಸಂಸ್ಥೆ ಏ.7 ರಂದು ವಿಶ್ವದ ಅತಿ ತೆಳುವಾದ ಲ್ಯಾಪ್ ಟಾಪ್ ನ್ನು ಬಿಡುಗಡೆಗೊಳಿಸಿದ್ದು ಜೂನ್ ತಿಂಗಳ ಮಧ್ಯದಿಂದ ಭಾರತದ ಮಾರುಕಟ್ಟೆಗಳಲ್ಲೂ ಲಭ್ಯವಿರಲಿದೆ.
ಇಂಟೆಲ್ ಕೋರ್ ಐ 5 ಮತ್ತು ಐ7 ಪ್ರೊಸೆಸರ್ ಹೊಂದಿರುವ ಹೆಚ್ ಪಿ ಕಂಪನಿಯ ಸ್ಪೆಕ್ಟರ್ ಲ್ಯಾಪ್ಟಾಪ್ 1 .1 ಕೆಜಿ ತೂಕ, ಎಎಎ ಬ್ಯಾಟರಿಯಷ್ಟೇ (10 .4 ಎಂಎಂ) ತೆಳುವಾಗಿದ್ದು  1 ,249 ಡಾಲರ್ ಬೆಲೆ ನಿಗದಿಪಡಿಸಲಾಗಿದೆ( ಭಾರತದಲ್ಲಿನ ಬೆಲೆ ಇನ್ನಷ್ಟೇ ನಿಗದಿಯಾಗಬೇಕಿದೆ).
ಸ್ಪೆಕ್ಟರ್ ಲ್ಯಾಪ್ ಟಾಪ್ 512 ಜಿಬಿ ಯಷ್ಟು ಸಂಗ್ರಹಣೆ ಸಾಮರ್ಥ್ಯ, 8 ಜಿಬಿಯಷ್ಟು ಮೆಮೊರಿ ಹೊಂದಿದೆ. ವಿಶ್ವದ ಅತಿ ತೆಳುವಾದ ಲ್ಯಾಪ್ ಟಾಪ್ ಸಾಮರ್ಥ್ಯ ಹಾಗೂ ವೈಶಿಷ್ಟ್ಯಗಳ ವಿಷಯದಲ್ಲಿ ಉಳಿದ ಲ್ಯಾಪ್ ಟಾಪ್ ಗಳಿಗಿಂತ ಕಡಿಮೆ ಇಲ್ಲ ಎಂದು ಹೆಚ್ ಪಿ ಏಷ್ಯಾ ಪೆಸಿಫಿಕ್ ಮತ್ತು ಜಪಾನ್ ನ ಉಪಾಧ್ಯಕ್ಷ  ಅನ್ನೆಲೀಸಿ ಒಲ್ಸನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com