ಮೈಕ್ರೋಸಾಫ್ಟ್ ವಿಂಡೋಸ್‌ನ ಹೊಸ ಆವೃತ್ತಿ ವಿಂಡೋಸ್ 10 ರಲ್ಲಿ ಸುರಕ್ಷಾ ನ್ಯೂನತೆಯನ್ನು ಖಾಸಿ ಸ್ಮಿತ್ ಎಂಬವರು ಪತ್ತೆ ಹಚ್ಚಿದ್ದಾರೆ.
ಈ ಸುರಕ್ಷಾ ನ್ಯೂನತೆಯಿಂದಾಗಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್‌ಗೆ ದಾಳಿ ಮಾಡಲು ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ಇತರ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಾಗುವುದು. ಇಲ್ಲಿ ನಡೆಯುವ ಹ್ಯಾಕಿಂಗ್ ಬೇಗನೆ ಪತ್ತೆ ಮಾಡಲು ಅಸಾಧ್ಯ.
ವಿಂಡೋಸ್ 10 ನಲ್ಲಿ ಮಾತ್ರವಲ್ಲ, ವಿಂಡೋಸ್ 7 ವರೆಗಿನ ಆವೃತ್ತಿಗಳಲ್ಲಿಯೂ ಸುರಕ್ಷಾ ದೋಷ ಇದೆ ಎಂದು ಹೇಳಲಾಗುತ್ತಿದೆ.
Regsvr32.exe (64 ಬಿಟ್ ಕಂಪ್ಯೂಟರ್‌ಗಳಲ್ಲಿ Regsvr64) ಎಂಬ ಪ್ರೋಗ್ರಾಂ ಇಲ್ಲಿ ವಿಲನ್ ಆಗಿದೆ. ಬೇರೊಂದು ಸ್ಥಳದಲ್ಲಿದ್ದುಕೊಂಡೇ ನಿಮ್ಮ ಕಂಪ್ಯೂಟರ್‌ನ್ನು ನಿಯಂತ್ರಿಸಲು ಈ ಪ್ರೋಗ್ರಾಂನಲ್ಲಿರುವ ದೋಷ ಹ್ಯಾಕರ್‌ಗಳಿಗೆ ಸಹಾಯ ಮಾಡುತ್ತದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೈಕ್ರೋಸಾಫ್ಟ್‌ಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಆದರೆ ವಿಂಡೋಸ್ ಫಯರ್ವಾಲ್ ಮೂಲಕ Regsvr ಪ್ರೋಗ್ರಾಂನನ್ನು ಕಾರ್ಯ ನಿರ್ವಹಿಸದಂತೆ (ಡಿಸೇಬಲ್) ಮಾಡಬಹುದಾಗಿದೆ.