ವಾಟ್ಸ್ಆ್ಯಪ್ ಮೆಸೇಜ್ ಗಳನ್ನು ಹಿಂದಕ್ಕೆ ಪಡೆಯುವ, ಎಡಿಟ್ ಮಾಡುವ ಸೌಲಭ್ಯ ಸದ್ಯದಲ್ಲೆ: ವರದಿ

ವಾಟ್ಸ್ ಆಪ್ ನಲ್ಲಿ ಯಾರಿಗೋ ಕಳಿಸಬೇಕಾದ ಸಂದೇಶ ಮತ್ತೆ ಯಾರಿಗೋ ಹೋದರೆ ಗ್ರಾಹಕರು ಇನ್ನು ಮುಂದೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
ವಾಟ್ಸ್ ಆಪ್
ವಾಟ್ಸ್ ಆಪ್
ನ್ಯೂಯಾರ್ಕ್: ವಾಟ್ಸ್ ಆಪ್ ನಲ್ಲಿ ಯಾರಿಗೋ ಕಳಿಸಬೇಕಾದ ಸಂದೇಶ  ಮತ್ತೆ ಯಾರಿಗೋ ಹೋದರೆ ಗ್ರಾಹಕರು ಇನ್ನು ಮುಂದೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ವಾಟ್ಸ್ ಆಪ್ ಸದ್ಯದಲ್ಲೇ ಮೆಸೇಜ್ ಗಳನ್ನು ಹಿಂದಕ್ಕೆ ಪಡೆಯುವ ಎಡಿಟ್ ಮಾಡುವ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿದೆ. 
ವಾಟ್ಸ್ ಆಪ್ ಬೀಟಾ ಇನ್ಫೋ ಟ್ವಿಟರ್ ಖಾತೆಯ ಪ್ರಕಾರ ವಾಟ್ಸ್ ಆಪ್ ಮೆಸೇಜ್ ಗಳನ್ನು ಹಿಂದಕ್ಕೆ ಪಡೆಯುವ ಎಡಿಟ್ ಮಾಡುವ ಆಯ್ಕೆಗಳನ್ನು ಸಕ್ರಿಯಗೊಳಿಸಲಿದ್ದು, ಬೀಟಾ ವರ್ಷನ್ ನಲ್ಲಿ ಪ್ರಾಯೋಗಿವಾಗಿ ಬಳಕೆ ಮಾಡಲಾಗುತ್ತಿದೆ  ಎಂದು ತಿಳಿದುಬಂದಿದೆ. 
ವಾಟ್ಸ್ ಆಪ್ ಬಳಕೆದಾರರು ಇತ್ತೀಚಿನ ಮೆಸೇಜ್ ಗಳನ್ನು ಮಾತ್ರ ಹಿಂಪಡೆಯಲು ಅಥವಾ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಆದರೆ ಹಳೆಯ ಮೆಸೇಜ್ ಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಐಒಎಸ್  2.17.1.869 ಗೆ ಮಾತ್ರ ಈ ಸೌಲಭ್ಯ ಸದ್ಯಕ್ಕೆ ಲಭ್ಯವಿದೆ. ನಿರಂತರ ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ವಾಟ್ಸ್ ಆಪ್ ಕಳೆದ ತಿಂಗಳು ವಿಡಿಯೋ ಕರೆ ಆಯ್ಕೆಯನ್ನು ಸಕ್ರಿಯಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com