ಪಿಎಸ್‌ಎಲ್‌ವಿ-ಸಿ34
ಪಿಎಸ್‌ಎಲ್‌ವಿ-ಸಿ34

ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಇಸ್ರೋ ಸಜ್ಜು! ಏಕಕಾಲಕ್ಕೆ 83 ಉಪಗ್ರಹ ಉಡಾವಣೆ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಜನವರಿಯಲ್ಲಿ ಏಕಕಾಲಕ್ಕೆ 83 ಉಪಗ್ರಹ ಉಡಾವಣೆ ಮಾಡಲಿದೆ...
Published on
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಜನವರಿಯಲ್ಲಿ ಏಕಕಾಲಕ್ಕೆ 83 ಉಪಗ್ರಹ ಉಡಾವಣೆ ಮಾಡಲಿದೆ. 
ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ)-ಸಿ37 ಉಡಾವಣಾ ವಾಹಕದಿಂದ 83 ಉಪಗ್ರಹಗಳ ಉಡಾವಣೆ ಮಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹೇಳಿದ್ದಾರೆ. 
ಇಸ್ರೇಲ್, ಕಜಕಿಸ್ತಾನ್, ನೆದರ್ಲ್ಯಾಂಡ್, ಸ್ವೀಜರ್ಲ್ಯಾಂಡ್ ಮತ್ತು ಅಮೆರಿಕದ 80 ಉಪಗ್ರಹ 500 ಕೆಜಿಯದ್ದಾಗಿದೆ. ಇನ್ನು ಇದರ ಜತೆಗೆ ಮೂರು ಸ್ವದೇಶಿ ಉಪಗ್ರಹಗಳಾದ ಕಾರ್ಟೋಸ್ಯಾಟ್-2 ಸಿರೀಸ್, 730 ಕೆಜಿ, ಐಎನ್ಎಸ್-1ಎ ಮತ್ತು ಐಎನ್ಎಸ್-1ಬಿ 30 ಕೆಜಿಯ ಉಪಗ್ರಹಗಳನ್ನು ಏಕಕಾಲಕ್ಕೆ ಇಸ್ರೋ ಉಡಾವಣೆ ಮಾಡಲಿದೆ. 
ಈ ಹಿಂದೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕಕಾಲಕ್ಕೆ ಬರೋಬ್ಬರಿ 20 ಉಪಗ್ರಹಗಳನ್ನು ಉಡಾವಣೆ ಮಾಡಿ ಇತಿಹಾಸ ನಿರ್ಮಿಸಿತ್ತು. 
ಇದರೊಂದಿಗೆ ಇಸ್ರೋ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕಿಗೆ ಪಾತ್ರವಾಗಿತ್ತು. ಇದೀಗ ಏಕಕಾಲದಲ್ಲಿ 83 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ್ದೆ ಆದರೆ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ. 
ಈ ಹಿಂದೆ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19  ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು 2013ರ ನವೆಂಬರ್‌ನಲ್ಲಿ 32 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 5 ಕಿಲೋದಿಂದ  ಹಿಡಿದು 100 ಕಿಲೋಗ್ರಾಂವರೆಗೆ ತೂಕವಿರುವ ಉಪಗ್ರಹಗಳಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com