ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರಲಿದೆ ಕಾರ್ ಕೀ ಬದಲಿಗೆ ಮೊಬೈಲ್ ಆಪ್!

ನೂತನ ಆವಿಷ್ಕಾರವೊಂದರಲ್ಲಿ ಸ್ವೀಡನ್ ನ ಕಾರ್ ಉತ್ಪಾದಕ ವೋಲ್ವೋ ಕಾರಿನ ಭೌತಿಕ ಕೀ ಬದಲಾಗಿ ಸ್ಮಾರ್ಟ್ ಫೋನ್ ಆಪ್ ಬಳಸಲು ಪರೀಕ್ಷೆಗಳನ್ನು ನಡೆಸಿದೆ.
Published on

ನ್ಯೂಯಾರ್ಕ್: ನೂತನ ಆವಿಷ್ಕಾರವೊಂದರಲ್ಲಿ ಸ್ವೀಡನ್ ನ ಕಾರ್ ಉತ್ಪಾದಕ ವೋಲ್ವೋ ಕಾರಿನ ಭೌತಿಕ ಕೀ ಬದಲಾಗಿ ಸ್ಮಾರ್ಟ್ ಫೋನ್ ಆಪ್ ಬಳಸಲು ಪರೀಕ್ಷೆಗಳನ್ನು ನಡೆಸಿದೆ. ಈ ರೀತಿಯ ಪರೀಕ್ಷೆ ನಡೆಸುತ್ತಿರುವ ಮುಂಚೂಣಿಯ ಸಂಸ್ಥೆಯಾಗಿದೆ.

"ಬ್ಲೂಟೂತ್ ತಂತ್ರಜ್ಞಾನವನ್ನು ಬಳಸಿ ಭೌತಿಕ ಕೀ ಮಾಡುವ ಕೆಲಸವನ್ನು ಈ ಸ್ಮಾರ್ಟ್ ಫೋನ್ ಆಪ್ ಮಾಡಬಲ್ಲುದಾಗಿದೆ" ಎಂದು ಅಂತರ್ಜಾಲ ಸುದ್ದಿತಾಣವೊಂದು ಶುಕ್ರವಾರ ವರದಿ ಮಾಡಿದೆ.

"ಆ ಆಪ್ ಮೂಲಕ ಚಾಲಕರು ಒಂದಕ್ಕಿಂತಲೂ ಹೆಚ್ಚು ಡಿಜಿಟಲ್ ಕೀಗಳನ್ನು ಹೊಂದಬಹುದಾಗಿದೆ. ಅದುದರಿಂದ ಒಂದೇ ಕಾರನ್ನು ಹಲವರು ಬಳಸಲು, ಅಥವಾ ಒಬ್ಬ ಹಲವು ಕಾರುಗಳನ್ನು ಬಳಸಲು ಸಾಧ್ಯವಾಗುತ್ತದೆ" ಎನ್ನುತ್ತದೆ ವರದಿ.

ಈ ಆಪ್ ಮೂಲಕ ಜಾಗತಿಕವಾಗಿ ವೋಲ್ವೋ ಕಾರುಗಳನ್ನು ಬಾಡಿಗೆಗೆ ಪಡೆಯಲು ಕೂಡ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಯಲಾಗಿದ್ದು ಈ ತಂತ್ರಜ್ಞಾನ ೨೦೧೭ರ ಹೊತ್ತಿಗೆ ಚಾಲನೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com