ಪ್ರಸ್ತುತ ರಾಕೆಟ್ ಉಡ್ಡಯಣ ರೀತಿಯಲ್ಲಾದರೆ ಬಾಹ್ಯಾಕಾಶ ನೌಕೆಯೊಂದು ಭೂಮಿಯಿಂದ ಮಂಗಳ ಗ್ರಹಕ್ಕೆ ತಲುಪಬೇಕಾದರೆ 5 ತಿಂಗಳುಗಳೇ ಬೇಕು. ಆದರೆ ಲೇಸರ್ ತಂತ್ರಜ್ಞಾನ ಬಳಸಿದರೆ 100 ಕೆಜಿ ತೂಕದ ಬಾಹ್ಯಾಕಾಶ ನೌಕೆ 3 ದಿನಗಳಲ್ಲಿ ಮಂಗಳನ ಅಂಗಳ ಸೇರುತ್ತದೆ. ಲೇಸರ್‌ಗೆ ವಸ್ತುವೊಂದನ್ನು ಚಲಿಸುವಂತೆ ಮಾಡುವ ಗುಣವಿದೆ. ಈ ಆಧಾರದಲ್ಲಿ ಲೇಸರ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಈ ತಂತ್ರಜ್ಞಾನವನ್ನು ಬಳಸಿ ಅಂತರಿಕ್ಷ ನೌಕೆಯನ್ನು ಕಳುಹಿಸುವ ಕಾಲ ದೂರವಿಲ್ಲ ಎಂದು ನಾಸಾ ಹೇಳಿದೆ.