
ನ್ಯೂಯಾರ್ಕ್: ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುವ ಲೈಂಗಿಕ ಕ್ರಿಯೆಯಿಲ್ಲದೆ ಸಂತಾನೋತ್ಪತ್ತಿ ಸರ್ಪಗಳಲ್ಲಿ ಸಾಮಾನ್ಯ ಎನ್ನುತ್ತದೆ ಹೊಸ ಅಧ್ಯಯನವೊಂದು.
ಆ ಸಂಶೋಧನೆ ಅಕಶೇರುಕಗಳ ವಿಕಸನದ ಸಿದ್ದಾಂತಕ್ಕೆ ಹೆಚ್ಚಿನ ಮಾಹಿತಿ ಒದಗಿಸಲು ಸಾಧ್ಯವಾಗಿದೆ.
ಸ್ವಾಭಾವಿಕ ಪ್ರದೇಶಗಳಲ್ಲಿ ವಾಸವಾಗಿರುವ ಬೋವಾ, ಪೈಥಾನ್, ಮಂಡಲ, ಕೆರೆ ಹಾವುಗಳ ಮೇಲೆ ನಡೆದಿರುವ ಈ ಸಂಶೋಧನೆಯಲ್ಲಿ ಹಿಂದಿನ ಸಿದ್ಧಾಂತಗಳನ್ನು ತಲೆಕೆಳಕು ಮಾಡುವ ಈ ಹೊಸ ಸಿದ್ಧಾಂತ ಬೆಳಕಿಗೆ ಬಂದಿದೆ.
ಈ ಸಂತಾನೋತ್ಪತ್ತಿ ಸಿದ್ಧಾಂತ ಇನ್ನೂ ಶೈಶಾವಸ್ಥೆಯಲ್ಲಿದ್ದು, ಈ ಸಂಶೋಧನೆ ಹಾವುಗಳಲ್ಲಿ ಪಾರ್ಥೆನೋಜೆನೆಸಿಸ್ ಹೇಗೆ ವಿಕಸನವಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಗತ್ಯ ಮಾಹಿತಿ ಒದಗಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನ ಬಯಲಾಜಿಕಲ್ ಜರ್ನಲ್ ಆಫ್ ದ ಲಿನ್ನೆಯನ್ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Advertisement