ಮೆಲ್ಬರ್ನ್: ವೈಜ್ಞಾನಿಕ ಬೆಳವಣಿಗೆಯಿಂದ ಮಾನವ ಸಂಕುಲ ಅಪಾಯದಲ್ಲಿದೆ ಎಂದಿದ್ದಾರೆ ಹಿರಿಯ ಕಾಸ್ಮಾಲಜಿ ಪ್ರಾಧ್ಯಾಪಕ-ವಿಜ್ಞಾನಿ ಸ್ಟೀಫನ್ ಹಾಕಿಂಗ್.
ಹೊಸ ತಂತ್ರಜ್ಞಾನದ ಬೆಳವಣಿಗೆಯಿಂದ ಮನುಕುಲಕ್ಕೆ ಹೆಚ್ಚೆಚ್ಚು ಅಪಾಯವೊಡ್ಡಿ, ಮುಂದಿನ ಕೆಲವು ಸಾವಿರ ವರ್ಷಗಳಲ್ಲಿ ವಿಶ್ವವೇ ಸರ್ವನಾಶವಾಗುವ ಸಾಧ್ಯತೆ ಇದೆ ಎಂದಿದ್ದಾರೆ ೭೪ ವರ್ಷದ ಭೌತ ಶಾಸ್ತ್ರ ಸಿದ್ಧಾಂತಿ-ವಿಜ್ಞಾನಿ ಹಾಕಿಂಗ್.
ಅಣು ಯುದ್ಧ, ಜಾಗತಿಕ ತಾಪಮಾನ, ತಳಿ ತಿದ್ದಿದ ವೈರಸ್ ಗಳು ಈ ಅಪಾಯಗಳನ್ನು ಹೆಚ್ಚೆಚ್ಚು ತಂದೊಡ್ಡುವ ಸಾಧ್ಯತೆ ಇದೆ ಎಂದಿದ್ದಾರೆ.
ಬಿಬಿಸಿ ರೀತ್ ಉಪನ್ಯಾಸ ಸರಣಿಯ ಪ್ರಶ್ನೋತ್ತರದಲ್ಲಿ ಭಾಗವಹಿಸಿರುವ ಪ್ರೊಫೆಸರ್, ನಕ್ಷತ್ರಗಳಿಗೆ ಮನುಷ್ಯರು ಗುಳೆ ಹೋಗಿ ತಪ್ಪಿಸಿಕೊಳ್ಳುವುದಕ್ಕೂ ಮೊದಲು ಇಲ್ಲಿರುವ ಸಮಯದಲ್ಲಿ ಎಚ್ಚರಿಕೆಯಿಂದರುವುದು ಅಗತ್ಯ ಎಂದಿದ್ದಾರೆ.
ಇದಕ್ಕೂ ಮೊದಲು ಹಾಕಿಂಗ್ ಅವರು ಕೃತಕ ಭುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿ ರೋಬೋಟ್ ಗಳು ಅನಿಯಂತ್ರಿತವಾಗುವುದನ್ನು ತಡೆಯಲು ಜಾಕತಿಕ ಒಪ್ಪಂದ ಅಗತ್ಯ ಎಂದಿದ್ದರು.
Advertisement