ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ
ಐಆರ್ ಎನ್ಎಸ್ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಬುಧವಾರ(ಜ.20 ) ರಂದು ಯಶಸ್ವಿಯಾಗಿ ಉಡಾವಣೆ ನಡೆಸಿದೆ.
ಐಆರ್ ಎನ್ಎಸ್ಎಸ್-1 ಸಿ ಉಪಗ್ರಹವನ್ನು ಹೊತ್ತೊಯ್ದಿರುವ ಉಪಗ್ರಹ ವಾಹಕ ಪಿಎಸ್ಎಲ್ ವಿ- ಸಿ 31 , ಅದನ್ನು ಭೂಸ್ಥಾಯಿ ಕಕ್ಷೆಗೆ ಸೇರಿಸಲಿದ್ದು,  ಏಳು ಸರಣಿ ಉಪಗ್ರಹಗಳು  ಮ್ಯಾಪಿಂಗ್ ಹಾಗೂ ಟ್ರ್ಯಾಕಿಂಗ್ ಜೊತೆಗೆ ರಸ್ತೆ, ವಾಯು ಮತ್ತು ಸಮುದ್ರ ಸಂಚಾರಕ್ಕೆ ಸಂಬಂಧಿಸಿದ ಸೇವೆಗಳನ್ನು ವಿಸ್ತರಿಸಲು ನೆರವಾಗಲಿದೆ.    
ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯಾಚರಣೆಯಲ್ಲಿರುವ ಇತರ ನಾಲ್ಕು ಉಪಗ್ರಹಗಳಿಗೆ ಪೂರಕವಾಗಿ ಪಿಎಸ್ ಎಲ್ ವಿ-ಸಿ 31 ಕೆಲಸ ಮಾಡಲಿದೆ. ಈ ವರ್ಷ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಉಪಗ್ರಹ ಉಡಾವಣಾ ಅಭಿಯಾನ ಪಿಎಸ್ ಎಲ್ ವಿ-ಸಿ 31 ಆಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com