ಪಾಸ್ ವರ್ಡ್ ಗೆ ಗುಡ್ ಬೈ, ಬ್ಯಾಂಕಿಂಗ್ ನಲ್ಲಿ ಬಯೋಮೆಟ್ರಿಕ್ ಯುಗಾರಂಭ

ಕೆಲವು ವಾರಗಳ ಹಿಂದಷ್ಟೇ ಖಾಸಗಿ ವಲಯದ ಇಂಡಸ್‌ ಇಂಡ್‌ ಬ್ಯಾಂಕ್‌ ಮೊಬೈಲ್‌ ಬ್ಯಾಂಕಿಂಗ್‌ ಗ್ರಾಹಕರಿಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಪರಿಚಯಿಸುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಕೆಲವು ವಾರಗಳ ಹಿಂದಷ್ಟೇ ಖಾಸಗಿ ವಲಯದ ಇಂಡಸ್‌ ಇಂಡ್‌ ಬ್ಯಾಂಕ್‌ ಮೊಬೈಲ್‌ ಬ್ಯಾಂಕಿಂಗ್‌ ಗ್ರಾಹಕರಿಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ವಿನೂತನ ಅನುಭವ ನೀಡಿತ್ತು. ಬಾಲಿವುಡ್‌ ನಟರಾದ ಫ‌ರ್‌ಹಾನ್‌ ಅಖ್ತರ್‌ ಮತ್ತು ಬೋಮನ್‌ ಇರಾನಿ ಅವರು ಈ ನೂತನ ತಂತ್ರಜ್ಞಾನದ ಅನನ್ಯತೆ ಹಾಗೂ ರೋಮಾಂಚಕತೆಯನ್ನು ಇತರರಿಗೂ ಪರಿಚಯಿಸಿದ್ದರು.
ಭಾರತದಲ್ಲಿ ಇಂಡಸ್‌ ಇಂಡ್‌ ಬ್ಯಾಂಕ್‌ ಮೊತ್ತ ಮೊದಲಾಗಿ ಬಯೋಮೆಟ್ರಿಕ್‌ ಪಾಸ್‌ವರ್ಡ್‌ ಅನ್ನು ಪರಿಚಯಿಸಿದ ಬಳಿಕ ಇದೀಗ ಐಸಿಐಸಿಐ ಬ್ಯಾಂಕ್‌, ಸ್ಟಾಂಡರ್ಡ್‌ ಚಾರ್ಟಡ್‌ರ ಬ್ಯಾಂಕ್‌, ಡಿಸಿಬಿ ಮುಂತಾಗಿ ಖಾಸಗಿ ಕ್ಷೇತ್ರದ ಹಲವಾರು ಬ್ಯಾಂಕಿಂಗ್‌ ದಿಗ್ಗಜಗಳು ಈ ವಿನೂತನ ಹಾಗೂ ಶೇ.100ರಷ್ಟು ಭದ್ರತೆಯ ಬಯೋಮೆಟ್ರಿಕ್‌ ಪಾಸ್‌ ವರ್ಡ್‌ ತಾಂತ್ರಿಕತೆಯನ್ನು ತರಾತುರಿಯಿಂದ ಜಾರಿಗೆ ತರುತ್ತಿವೆ. ಆ ಮೂಲಕ ಸದ್ಯದಲ್ಲೇ ಎಲ್ಲ ಬ್ಯಾಂಕುಗಳು ಹಳೇಕಾಲದ, ಸದಾ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಪಾಸ್‌ ವರ್ಡ್‌ ಕ್ರಮಕ್ಕೆ ಗುಡ್‌ ಬೈ ಹೇಳಲಿವೆ.
ಬಯೋಮೆಟ್ರಿಕ್‌ ಪಾಸ್‌ ವರ್ಡ್‌ ಎಂದರೆ ಬೆರಳಚ್ಚು ಪಾಸ್‌ವರ್ಡ್‌ ಎಂದು ಸರಳವಾಗಿ ಹೇಳಬಹುದು. ಫೊರೆನ್ಸಿಕ್‌ ವಿಜ್ಞಾನದ ಪ್ರಕಾರ ಯಾರೊಬ್ಬರ ಬೆರಳಚ್ಚು ಕೂಡ ಇನ್ನೊಬ್ಬರ ಬೆರಳಚ್ಚನ್ನು ಹೋಲುವುದಿಲ್ಲ. ಪ್ರತಿಯೋರ್ವರ ಬೆರಳಚ್ಚು ಅನನ್ಯ ಮತ್ತು ಏಕಮಾತ್ರ ! ಅಂತೆಯೇ ಬೆರಳಚ್ಚು ಪಾಸ್‌ವರ್ಡ್‌ ತಂತ್ರಜ್ಞಾನ ಬ್ಯಾಂಕಿಂಗ್‌ ರಂಗಕ್ಕೆ ಒಂದು ವರದಾನವೆಂದು ತಿಳಿಯಲಾಗಿದೆ.
ಬೆರಳಚ್ಚು ಮಾತ್ರವಲ್ಲದೆ ಮನುಷ್ಯನ ಜೈವಿಕ ವಿವರಗಳು ಮತ್ತು ಆತನ ಸ್ವಭಾವ ಗುಣಲಕ್ಷಣಗಳು ಜಾಗತಿಕ ಹಣಕಾಸು ಸೇವಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲವು ಎಂದು ಈಗಲೇ ತಿಳಿಯಲಾಗಿದೆ.
ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ ಬಯೋಮೆಟ್ರಿಕ್‌ ಪಾಸ್‌ವರ್ಡ್‌ ತಂತ್ರಜ್ಞಾನವನ್ನು ಇದೀಗ ತನ್ನ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ ಗೆ ಅಳವಡಿಸಿಕೊಂಡಿದೆ. ಡಿಸಿಬಿ ಈಗಾಗಲೇ ಬಯೋಮೆಟ್ರಿಕ್‌ ಆಧಾರಿತ ಎಟಿಎಂ ಯಂತ್ರವನ್ನು ಬೆಂಗಳೂರಿನಲ್ಲಿ ಈಗಾಗಲೇ ಪರಿಚಯಿಸಿದೆ ಮತ್ತು ಆ ಮೂಲಕ ತನ್ನ ಗ್ರಾಹಕರು ಎಟಿ ಎಂ ಅಥವಾ ಡೆಬಿಡ್‌ ಕಾರ್ಡ್‌ ಅಥವಾ ಪಿಐಎನ್‌ ನಂಬರ್‌ ಇಲ್ಲದೇನೇ ನಗದನ್ನು ಹಿಂಪಡೆಯುವ ತಾಂತ್ರಿಕ ಅವಕಾಶವನ್ನು ಒದಗಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com