ಶೀಘ್ರವೇ ಪಿಜ್ಜಾ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳಿಂದ ಆರ್ಡರ್ ಮಾಡುವ ವ್ಯವಸ್ಥೆ

ಸಾಮಾಜಿಕ ಜಾಲತಾಣಗಳ ಮೂಲಕವೂ ಆಹಾರ ಆರ್ಡರ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಅಮೆರಿಕನ್ ರೆಸ್ಟೋರೆಂಟ್ ಪಿಜ್ಜಾ ಹಟ್ ತಿಳಿಸಿದೆ.
ಪಿಜ್ಜಾ ಹಟ್
ಪಿಜ್ಜಾ ಹಟ್

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕವೂ ಆಹಾರ ಆರ್ಡರ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಅಮೆರಿಕನ್ ರೆಸ್ಟೋರೆಂಟ್ ಪಿಜ್ಜಾ ಹಟ್ ತಿಳಿಸಿದೆ.

ಫೇಸ್ ಬುಕ್, ಟ್ವಿಟರ್, ಮೆಸೇಂಜರ್ ಮೂಲಕ ಪಿಜ್ಜಾ ಆರ್ಡರ್ ಮಾಡುವ ವ್ಯವಸ್ಥೆ ಆಗಸ್ಟ್ ನಿಂದ ಜಾರಿಯಾಗಲಿದೆ. ಸ್ಯಾನ್ ಫ್ರಯಾನ್ಸಿಸ್ಕೊದಲ್ಲಿ ಮೊದಲ ಬಾರಿಗೆ ಈ ಪ್ರಯೋಗ ನಡೆಸಲಾಗುತ್ತದೆ ಎಂದು ಪಿಜ್ಜಾ ಹಟ್ ನ ಡಿಜಿಟಲ್ ವಿಭಾಗದ ಮುಖ್ಯಸ್ಥ ಬ್ಯಾರನ್ ಕಾಂಕಾರ್ಸ್ ಘೋಷಿಸಿದ್ದಾರೆ.

ಪಿಜ್ಜಾ ಹಟ್ ಗ್ರಾಹಕರಿಗೆ ತಮ್ಮ ಇಷ್ಟದ ಪದಾರ್ಥಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡುವ ವಿಧಾನವನ್ನು ಮತ್ತಷ್ಟು ಸುಲಭವಾಗಿಸಲು ಸಾಮಾಜಿಕ ಜಾಲತಾಣಗಳ ಮೂಲಕ ಆರ್ಡರ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ ಎಂದು ಪಿಜ್ಜಾ ಹಟ್ ಸಂಸ್ಥೆ ತಿಳಿಸಿದೆ. ಆರ್ಡರ್ ಮಾಡುವ ವ್ಯವಸ್ಥೆಯನ್ನು ಸುಧಾರಿಸಲು ಇರುವ ಅವಕಾಶಗಳನ್ನು ಪಿಜ್ಜಾ ಹಟ್ ಬಳಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪಿಜ್ಜಾ ಆಹಾರೋತ್ಪನ್ನಗಳನ್ನು ಆರ್ಡರ್ ಮಾಡುವ ವ್ಯವಸ್ಥೆಗಾಗಿ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com