ಫೇಸ್ ಬುಕ್ ನ್ನು ಹಿಂದಿಕ್ಕಿದ ಪೋಕ್ಮನ್ ಗೋ ಗೇಮ್

ಬಿಡುಗಡೆಯಾದಾಗಿನಿಂದ ಈ ವರೆಗೂ ಹಲವು ದಾಖಲೆಗಳನ್ನು ಬರೆದಿರುವ ಪೋಕ್ಮನ್ ಗೋ ಗೇಮ್ ನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದಿನವೊಂದಕ್ಕೆ ಫೇಸ್ ಬುಕ್ ಗಿಂತ ಎರಡರಷ್ಟು ಬಳಕೆಯಾಗುತ್ತಿದೆ.
ಫೇಸ್ ಬುಕ್ ನ್ನು ಹಿಂದಿಕ್ಕಿದ ಪೋಕ್ಮನ್ ಗೋ ಗೇಮ್
ಫೇಸ್ ಬುಕ್ ನ್ನು ಹಿಂದಿಕ್ಕಿದ ಪೋಕ್ಮನ್ ಗೋ ಗೇಮ್

ನ್ಯೂಯಾರ್ಕ್: ಬಿಡುಗಡೆಯಾದಾಗಿನಿಂದ ಈ ವರೆಗೂ ಹಲವು ದಾಖಲೆಗಳನ್ನು ಬರೆದಿರುವ ಪೋಕ್ಮನ್ ಗೋ ಗೇಮ್ ನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದಿನವೊಂದಕ್ಕೆ ಫೇಸ್ ಬುಕ್ ಗಿಂತ ಎರಡರಷ್ಟು ಬಳಕೆಯಾಗುತ್ತಿದೆ ಎಂಬ ವರದಿ ಪ್ರಕಟವಾಗಿದೆ.

ಆಂಡ್ರಾಯ್ಡ್ ಮೊಬೈಲ್ ಗಳಳ್ಳಿ ಫೇಸ್ ಬುಕ್ ಆಪ್ ಗಿಂತ ಪೋಕ್ಮನ್ ಗೋ ಗೇಮ್ ಆಪ್ ಹೆಚ್ಚು ಬಳಕೆಯಾಗುತ್ತಿದ್ದು, ಆಪ್ ಬಿಡುಗಡೆಯಾದ ಒಂದು ವಾರದಲ್ಲಿ ಬಳಕೆದಾರರು ಪ್ರತಿದಿನ ಪೋಕ್ಮನ್ ಗೋ ಗೇಮ್ ನಲ್ಲಿ 75 ನಿಮಿಷಗಳನ್ನು ಕಳೆದರೆ, ಫೇಸ್ ಬುಕ್ ಆಪ್ ನಲ್ಲಿ 35 ನಿಮಿಷಗಳಷ್ಟೇ ಸಕ್ರಿಯರಾಗಿರುತ್ತಾರೆ ಎಂದು ಫೋರ್ಬ್ಸ್ ಡಾಟ್ ಕಾಮ್ ವರದಿ ಮಾಡಿದೆ.
ಇನ್ನು ಪೋಕ್ಮನ್ ಗೋ ಗೇಮ್ ಯೂಟ್ಯೂಬ್ ಗೂ ಹೊಡೆತ ನೀಡಿದ್ದು, ಪೋಕ್ಮನ್ ಗೋ ಗೇಮ್ ಬಿಡುಗಡೆಯಾದಾಗಿನಿಂದ ಯುಟ್ಯೂಬ್ ಬಳಕೆ ದಿನವೊಂದಕ್ಕೆ ಶೇ.9 ರಷ್ಟು ಕಡಿಮೆಯಾಗಿದ್ದರೆ, ಸ್ನ್ಯಾಪ್ ಚಾಟ್ ಬಳಕೆ ಶೇ.18 ರಷ್ಟು ಕಡಿಮೆಯಾಗಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.  ಆಪ್ ಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಡುಗಡೆಯಾದ ಒಂದೇ ವಾರಕ್ಕೆ ಹೆಚ್ಚು ಡೌನ್ ಲೋಡ್ ಆದ ಆಪ್ ಎಂಬ ಹೆಗ್ಗಳಿಕೆಗೆ ಪೋಕ್ಮನ್ ಗೋ ಗೇಮ್ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com