ಮೊದಲ ಬಾರಿಗೆ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿರುವ ಟ್ವಿಟರ್

ನಿರಂತರ ಹೊಸ ಪ್ರಯೋಗಳನ್ನು ನಡೆಸುತ್ತಿರುವ ಟ್ವಿಟರ್, ಈಗ ಇ- ಲೀಗ್ ಮೂಲಕ ತನ್ನ ಮೊದಲ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿದೆ.
ಟ್ವಿಟರ್
ಟ್ವಿಟರ್
Updated on
ನ್ಯೂಯಾರ್ಕ್: ನಿರಂತರ ಹೊಸ ಪ್ರಯೋಗಳನ್ನು ನಡೆಸುತ್ತಿರುವ ಟ್ವಿಟರ್, ಈಗ ಇ- ಲೀಗ್ ಮೂಲಕ ತನ್ನ ಮೊದಲ ಇ-ಸ್ಪೋರ್ಟ್ಸ್ ಸ್ಪರ್ಧೆಯನ್ನು ನೇರ ಪ್ರಸಾರ ಮಾಡಲಿದೆ. ಮುಂದಿನ ವಾರದಿಂದ ಸ್ಪರ್ಧೆ ನೇರಪ್ರಸಾರವಾಗಲಿದ್ದು, ಕೌಂಟರ್ ಸ್ಟ್ರೈಕ್: ಗ್ಲೋಬಲ್ ಅಫೆನ್ಸೀವ್ ಎಂಬ ಶೂಟರ್ ವಿಡಿಯೋ ಗೇಮ್ ಗಳ ಮೂಲಕ ಗೇಮರ್ ಗಳನ್ನು ಸೆಳೆಯಲು ಸಾಧ್ಯವಾಗಲಿದೆ. 
ಅಟ್ಲಾಂಟಾದಲ್ಲಿ ಮುಂದಿನ ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಗೇಮಿಂಗ್ ಸ್ಪರ್ಧೆಯ ಸೆಮಿ-ಫೈನಲ್ ಹಾಗೂ ಚಾಂಪಿಯನ್ ಶಿಪ್ ಸ್ಪರ್ಧೆಯ ನೇರ ಪ್ರಸಾರ ಮಾಡಲು ಇತ್ತೀಚೆಗಷ್ಟೇ ಟ್ವಿಟರ್ ಪ್ರಸಿದ್ಧ ಇ-ಸ್ಪೋರ್ಟ್ಸ್ ಸಂಸ್ಥೆ ಇ-ಲೀಗ್ ನೊಂದಿಗೆ  ಒಪ್ಪಂದ ಮಾಡಿಕೊಂಡಿತ್ತು.  ನೇರಪ್ರಾಸರದೊಂದಿಗೆ  @EL ಎಂಬ ಟ್ವಿಟರ್ ಖಾತೆ ಸ್ಪರ್ಧೆಯ ಮುಖ್ಯಾಂಶ, ಜಿಫ್ ಫೈಲುಗಳು, ಸ್ಕೋರ್ ಅಪ್ ಡೇಟ್ ಗಳನ್ನು ನೀಡಲಿದೆ. 
ಇ-ಲೀಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಇ-ಸ್ಪೋರ್ಟ್ಸ್ ಗೆ ಟ್ವಿಟರ್ ಮೂಲಕ ಗೇಮಿಂಗ್ ನ್ನು ಉತ್ತೇಜಿಸಲು ಸಾಧ್ಯವಾಗಲಿದೆ. ಇನ್ನು ಟ್ವಿಟರ್ ಗೆ ಗೇಮಿಂಗ್ ಮೂಲಕ ಹೆಚ್ಚು ಬಳಕೆದಾರರನ್ನು ಪಡೆಯಲು ಸಾಧ್ಯವಾಗಲಿದೆ.  ಇ ಸ್ಪೋರ್ಟ್ಸ್ ಅಭಿಮಾನಿಗಳು ಟ್ವಿಟರ್ ಮೂಲಕ ಸ್ಪರ್ಧಾತ್ಮಕ ಗೇಮಿಂಗ್ ಬಗ್ಗೆ ಮಾತನಾದಬಹುದು ಎಂದು ಟ್ವಿಟರ್ ನ ಸಿಇಒ ಆಂಟೊನಿ ನೊಟೋ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com