ಪ್ಲಾಸ್ಟಿಕ್ ತಿನ್ನುವ ಬ್ಯಾಕ್ಟೀರಿಯಾ ಕಂಡುಹಿಡಿದ ವಿಜ್ಞಾನಿಗಳು

ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಎಂಜೈಮ್ ಗಳನ್ನು ಬಳಸಿ ಪ್ಲಾಸ್ಟಿಕ್ ಅನ್ನು ಮುರಿದು ಜೀರ್ಣಿಸಬಲ್ಲ ಬ್ಯಾಕ್ಟೀರಿಯಾ ಕಂಡುಹಿಡಿದಿದ್ದಾರೆ ಎಂದು ಜರ್ನಲ್ ಸೈನ್ಸ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಎಂಜೈಮ್ ಗಳನ್ನು ಬಳಸಿ ಪ್ಲಾಸ್ಟಿಕ್ ಅನ್ನು ಮುರಿದು ಜೀರ್ಣಿಸಬಲ್ಲ ಬ್ಯಾಕ್ಟೀರಿಯಾ ಕಂಡುಹಿಡಿದಿದ್ದಾರೆ ಎಂದು ಜರ್ನಲ್ ಸೈನ್ಸ್ ಪತ್ರಿಕೆ ವರದಿ ಮಾಡಿದೆ.

ಐದು ವರ್ಷಗಳ ಕಾಲ ಮೈಕ್ರೋಬ್ ಗಳು ಮತ್ತು ಪ್ಲಾಸ್ಟಿಕ್ ಜೊತೆ ಕೆಲಸ ಮಾಡಿದ ಮೇಲೆ, ಇಡೆಯೋನೆಲ್ಲಾ ಸಾಕೈನೆಸಿಸ್ ಎಂಬ ಬ್ಯಾಕ್ಟೀರಿಯಾ ಪ್ಲಾಸ್ಟಿಕ್ ವಸ್ತುಗಳಲ್ಲಿ ಬಳಸುವ ಪಾಲಿಥೀನ್ ತೆರೆಪ್ಥಲೇಟ್ ಅನ್ನು ಕರಗಿಸಬಲ್ಲದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

2013 ರಲ್ಲೇ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ೫೬ ಮಿಲಿಯನ್ ಟನ್ ಇದ್ದು, ಇದು ಪರಿಸರಕ್ಕೆ ತೀವ್ರ ಸವಾಲು ಒಡ್ಡಿದೆ.

ವಿಜ್ಞಾನಿಗಳು ಪ್ಲಾಸ್ಟಿಕ್ ಅನ್ನು ಕೊಳೆಯುವಂತೆ ಮಾಡಬಲ್ಲ ಫಂಗೈ ಅನ್ನು ಈ ಹಿಂದೆ ಕಡು ಹಿಡಿದಿದ್ದರು, ಪ್ಲಾಸ್ಟಿಕ್ ತಿನ್ನಬಲ್ಲ ಬ್ಯಾಕ್ಟೀರಿಯಾ ಬೆಳಕಿಗೆ ಬಂದಿರುವುದು ಇದೇ ದಲು.

೩೦ ಡಿಗ್ರಿ ಉಷ್ಣಾಂಶದಲ್ಲಿ ಆರು ವಾರಗಳಲ್ಲಿ ತೆಳುವಾದ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಕೊಳೆಯುವಂತೆ ಮಾಡಬಲ್ಲದಾಗಿದೆ ಈ ಬ್ಯಾಕ್ಟೀರಿಯಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com