ಮೆಕ್ಸಿಕೋದಲ್ಲಿ ೯೫ ಮಿಲಿಯನ್ ವರ್ಷಗಳ ಹಿಂದಿನ ಡೈನೋಸಾರ್ ಪಳೆಯುಳಿಕೆಗಳ ಪತ್ತೆ

೭೦ ರಿಂದ ೯೫ ದಶಲಕ್ಷ ವರ್ಷಗಳ ಹಿಂದಿನ ಡೈನೋಸಾರ್ ಪಳೆಯುಳಿಕೆಗಳನ್ನು ಉತ್ತರ ಮೆಕ್ಸಿಕೋ ರಾಜ್ಯ ಚಿಚುವಾಹದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಮಾಧ್ಯಮವೊಂದು ವರದಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆಕ್ಸಿಕೋ: ೭೦ ರಿಂದ ೯೫ ದಶಲಕ್ಷ ವರ್ಷಗಳ ಹಿಂದಿನ ಡೈನೋಸಾರ್ ಪಳೆಯುಳಿಕೆಗಳನ್ನು ಉತ್ತರ ಮೆಕ್ಸಿಕೋ ರಾಜ್ಯ ಚಿಚುವಾಹದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಒಜಿನಾಗ, ಕೊಯಾಮೆ ಡೆಲ್ ಸೊಟೋಲ್ ಮತ್ತು ಅಲ್ದಾಮ ನಗರಸಭೆಗಳ ಪ್ರದೇಶಗಳ ೧೭ ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಈ ಪಳೆಯುಳಿಕೆಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಮಾನವಶಾಸ್ತ್ರ ಮತ್ತು ಇತಿಹಾಸ ಅಧ್ಯಯನ ಸಂಸ್ಥೆ(ಐ ಎನ್ ಎ ಎಚ್) ತಿಳಿಸಿದೆ ಎಂದು ಇ ಎಫ್ ಇ ನ್ಯೂಸ್ ವರದಿ ಮಾಡಿದೆ.

೬೫ ರಿಂದ ೧೪೫ ದಶಲಕ್ಷ ವರ್ಷಗಳ ಹಿಂದಿನ ಕ್ರೆಟಾಕಿಯೋಸ್ ಸಂದರ್ಭದಲ್ಲಿ, ಈ ಗ್ರಹದ ಈ ಭಾಗದ ಸಮುದ್ರದ ಗಡಿಗಳನ್ನು ತಿಳಿಯಲು ಇದು ಸಹಕರಿಸುತ್ತದೆ ಎಂದು ಕೂಡ ಐ ಎನ್ ಎ ಎಚ್ ತಿಳಿಸಿದೆ.

"ಇವುಗಳಲ್ಲಿ ಹೆಚ್ಚಿನ ಪಳೆಯುಳಿಕೆಗಳು ಸಮುದ್ರ ಕಶೇರುಕಗಳದ್ದಾಗಿವೆ. ಅವುಗಳ ಹೊರ ಕವಚ, ಶಂಬುಕಗಳು ಪತ್ತೆಯಾಗಿವೆ" ಎಂದು ಐ ಎನ್ ಎ ಎಚ್ ತಿಳಿಸಿದೆ.

ಬಾತುಕೋಳಿಯ ಕೊಕ್ಕಿನ ಹಾಡ್ರೋಸೌರಿಡ್ ಡೈನೋಸಾರ್ ನ ಪಾದದ ಚೂರುಗಳು ಅಲ್ದಾಮಾದಲ್ಲಿ ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com