ಟ್ವಿಟ್ಟರ್ ೧೪೦ ಅಕ್ಷರಗಳ ಮಿತಿಯಲ್ಲಿ ಬದಲಾವಣೆಯಿಲ್ಲ: ಸಿ ಇ ಒ ಜ್ಯಾಕ್ ಡೋರ್ಸಿ

ಟ್ವಿಟ್ಟರ್ ತನ್ನ ೧೪೦ ಅಕ್ಷರಗಳ ಮಿತಿಯನ್ನು ರದ್ದುಗೊಳಿಸಿ ಹೆಚ್ಚೆಚ್ಚು ಅಕ್ಷರಗಳಲ್ಲಿ ಬರೆಯಲು ಅವಕಾಶ ನೀಡಲಿದೆ ಎಂಬ ಸುದ್ದಿಗೆ ತಡೆ ಹಾಕಿರುವ ಸಂಸ್ಥೆ, ೧೪೦ ಅಕ್ಷರಗಳ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಟ್ವಿಟ್ಟರ್ ತನ್ನ ೧೪೦ ಅಕ್ಷರಗಳ ಮಿತಿಯನ್ನು ರದ್ದುಗೊಳಿಸಿ ಹೆಚ್ಚೆಚ್ಚು ಅಕ್ಷರಗಳಲ್ಲಿ ಬರೆಯಲು ಅವಕಾಶ ನೀಡಲಿದೆ ಎಂಬ ಸುದ್ದಿಗೆ ತಡೆ ಹಾಕಿರುವ ಸಂಸ್ಥೆ, ೧೪೦ ಅಕ್ಷರಗಳ ಮಿತಿ ಹಾಗೆಯೇ ಉಳಿಯಲಿದೆ ಎಂದಿದೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜ್ಯಾಕ್ ಡೋರ್ಸಿ, "೧೪೦ ಅಕ್ಷರಗಳ ಮಿತಿ ಅತ್ಯುತ್ತಮವಾದ ನಿರ್ಬಂಧ ಮತ್ತು ಟ್ವಿಟ್ಟರ್ ಇದನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ" ಎಂದಿದ್ದಾರೆ.

"೧೪೦ ಅಕ್ಷರಗಳ ಮಿತಿ ಹಾಗೆಯೇ ಉಳಿಯಲಿದೆ. ಇದು ನಮಗೆ ಅತ್ಯುತಮವಾದ ನಿರ್ಬಂಧ. ಚಿಕ್ಕದಾಗಿ ಚೊಕ್ಕವಾಗಿ ಕ್ಷಣಗಳನ್ನು ಹಂಚಿಕೊಳ್ಳಲು ಇದು ಸಹಕಾರಿ. .. ನಾವು ಬಹಳಷ್ಟು ಬದಲಾವಣೆ ಮಾಡುತ್ತಿದ್ದೇವೆ. ಟ್ವಿಟ್ಟರ್ ಅನ್ನು ಇನ್ನೂ ಅತ್ಯುತ್ತಪಡಿಸುತ್ತೇವೆ" ಎಂದು ಸಿ ಇ ಒ ಹೇಳಿರುವುದಾಗಿ ಟೆಕ್ ಕ್ರಂಚ್ ವರದಿ ಮಾಡಿದೆ.

ಜನವರಿಯಲ್ಲಿ ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಟ್ವಿಟ್ಟರ್ ಅಕ್ಷರ ಮಿತಿಯನ್ನು ೧೪೦ರಿಂದ ೧೦೦೦೦ ಅಕ್ಷರಗಳಿಗೆ ಹೆಚ್ಚಿಸಲಿದೆ ಎಂದು ತಿಳಿಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com