ಭೂಮಿಯಿಂದಾಚೆ ಮಾನವ ವಾಸಯೋಗ್ಯ ಮೂರು ಗ್ರಹಗಳು ಪತ್ತೆ

ಇದೀಗ ಮನುಷ್ಯನಿಗೆ ವಾಸಯೋಗ್ಯವೆಂದು ಹೇಳಲಾಗುತ್ತಿರುವ ಮೂರು ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 39 ಬೆಳಕಿನ ವರ್ಷ ದೂರದಲ್ಲಿರುವ ಒಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಇದೀಗ ಮನುಷ್ಯನಿಗೆ ವಾಸಯೋಗ್ಯವೆಂದು ಹೇಳಲಾಗುತ್ತಿರುವ ಮೂರು ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.  39  ಬೆಳಕಿನ ವರ್ಷ ದೂರದಲ್ಲಿರುವ ಒಂದು ಕುಬ್ಜ ನಕ್ಷತ್ರವೊಂದರ ಸುತ್ತು ಈ ಗ್ರಹಗಳು ಸುತ್ತುತ್ತಿದ್ದು, ಭೂಮಿಯಷ್ಟೇ ಗಾತ್ರ ಮತ್ತು ಅದರಂತೆಯೇ ವಾತಾವರಣವಿರುವ ಗ್ರಹಗಳಾಗಿವೆ ಇವು. 
ಭೂಮಿಯ ಹೊರಗೆ ಅನ್ಯ ಗ್ರಹಗಳಲ್ಲಿ ಮನುಷ್ಯ ವಾಸ ಮಾಡಲು ಸಾಧ್ಯವೇ? ಎಂಬುದರ ಬಗ್ಗೆ ಸಂಶೋಧನೆಗಳು ನಡೆದು ಬರುತ್ತಿದ್ದು, ಆ ಸಂಶೋಧನೆಯಲ್ಲಿ ಸಿಕ್ಕ ಮಹತ್ತರ ಮಾಹಿತಿಯಾಗಿದೆ ಇದು ಎಂದು ನೇಚರ್ ಮ್ಯಾಗಜಿನಲ್ಲಿ ಪ್ರಕಟವಾದ ಪ್ರಬಂಧದಲ್ಲಿ ಮೈಕಲ್ ಗಿಲ್ಲನ್, ಇಮ್ಯಾನುವಲ್ ಜೆಹಿನ್, ಜೂಲಿಯನ್ ಡೇ ವಿಟ್ ಎಂಬವರು ಹೇಳಿದ್ದಾರೆ.
ಟ್ರಾಪಿಸ್ಟ್ 1 ಎಂದು ನಾಮಕರಣ ಮಾಡಿರುವ ಈ ಗ್ರಹವನ್ನು ಮೊದಲು ಪತ್ತೆ ಹಚ್ಚಲಾಗಿದೆ. ಸೂರ್ಯನ ಎಂಟನೇ ಒಂದು ಭಾಗದಷ್ಟು ಮಾತ್ರ ಗಾತ್ರವಿರುವ ನಕ್ಷತ್ರವೊಂದರ ಸುತ್ತ ಟ್ರಾಪಿಸ್ಟ್  ಸುತ್ತುತ್ತಿದೆ. ಇದರ ಹಿಂದೆಯೇ ಇದೇ ರೀತಿಯ ಎರಡು ಗ್ರಹಗಳನ್ನೂ ಪತ್ತೆ ಹಚ್ಚಲಾಗಿದೆ.
ಸೂರ್ಯನಿಗಿಂತ ಕಡಿಮೆ ತಾಪವಿರುವ ನಕ್ಷತ್ರದ ಸುತ್ತು ಸುತ್ತುತ್ತಿರುವ ಗ್ರಹಗಳಾಗಿರುವ ಕಾರಣ ಇಲ್ಲಿ ಜಲ ಮೂಲಗಳು ಮತ್ತು ವಾಸಯೋಗ್ಯ ವಾತಾವರಣ ಇರುವ ಸಾಧ್ಯತೆಯಿದೆ. ಭೂಮಿಯ ಹತ್ತಿರವೇ ಈ ಗ್ರಹಗಳಿರುವ ಕಾರಣ ಈ ಬಗ್ಗೆ ಅಧ್ಯಯನ ನಡೆಸುವುದು ಸುಲಭವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com