ಧರಿಸಲು ಸಾಧ್ಯವಾಗುವ ರೋಬೋಟ್ ತಯಾರಿಸುತ್ತಿರುವ ಹುಂಡೈ!

ಹುಂಡೈಸಂಸ್ಥೆ ಮಿಲಿಟರಿ ಹಾಗೂ ಉತ್ಪಾದನೆ ವಲಯದಲ್ಲಿ ಉಪಯೋಗವಾಗುವಂತಹ ವೇರಿಂಗ್ (ಧರಿಸಬಹುದಾದ) ರೋಬೋಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಧರಿಸಲು ಸಾಧ್ಯವಾಗುವ ರೋಬೋಟ್ ತಯಾರಿಸುತ್ತಿರುವ ಹುಂಡೈ!
ಧರಿಸಲು ಸಾಧ್ಯವಾಗುವ ರೋಬೋಟ್ ತಯಾರಿಸುತ್ತಿರುವ ಹುಂಡೈ!

ಸಿಯೋಲ್: ದಕ್ಷಿಣ ಕೊರಿಯಾದ ವಾಹನ ಉತ್ಪಾದಕ ಸಂಸ್ಥೆ ಹುಂಡೈ ಸಂಸ್ಥೆ ಮಿಲಿಟರಿ ಹಾಗೂ ಉತ್ಪಾದನೆ ವಲಯದಲ್ಲಿ ಉಪಯೋಗವಾಗುವಂತಹ ವೇರಿಂಗ್ (ಧರಿಸಬಹುದಾದ) ರೋಬೋಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸಲಾಗಿರುವ ಈ ರೋಬೋಟ್ ಗಳು ವಸ್ತುಗಳ ಚಲನಶೀಲತೆಯನ್ನು ಹೆಚ್ಚಿಸುವುದು ಸೇರಿದಂತೆ ವಿಭಿನ್ನ ಕ್ಷೇತ್ರಗಳಲ್ಲಿ ಬಳಕೆಯಾಗಲಿವೆ ಎಂದು ಹುಂಡೈ ಸಂಸ್ಥೆ ತಿಳಿಸಿದೆ.



ಹಾಲಿವುಡ್ ಚಿತ್ರ ಐರನ್ ಮ್ಯಾನ್ ನಲ್ಲಿ ಕಾಣಸಿಗುವ  ಉಡುಪಿನ ಮಾದರಿಯಲ್ಲೇ ಈ ಹುಂಡೈ ಸಂಸ್ಥೆಯೂ ವೇರಿಂಗ್( ಧರಿಸಬಹುದಾದ) ರೋಬೋಟ್ ನ್ನು ಅಭಿವೃದ್ಧಿಪಡಿಸಿದೆ.
ರೋಬೋಟ್ ನ್ನು ನಿಯಂತ್ರಿಸುವ ವ್ಯಕ್ತಿಯ ದೈಹಿಕ ಬಲವನ್ನು ಹೆಚ್ಚಿಸಿ 60 ಕೆಜಿಯಷ್ಟು ತೂಕವಿರುವ ವಸ್ತುವನ್ನು ಎತ್ತುವುದನ್ನು ಈ ರೋಬೋಟ್ ಸಾಧ್ಯಮಾಡಲಿದೆ ಎಂದು ತಿಳಿದುಬಂದಿದೆ. ದೈಹಿಕ ನ್ಯೂನತೆಗಳುಳ್ಳ ವ್ಯಕ್ತಿಗಳಿಗೆ ಹಾಗೂ ವೃದ್ಧರಿಗೆ ಈ ರೋಬೋಟ್ ನಿಂದ ಸಾಕಷ್ಟು  ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com