ಸಿಎಸ್ ಐಆರ್ ನಿಂದ ಸೌರ ವಿದ್ಯುತ್ ಉತ್ಪಾದಿಸುವ ಮರ ಅಭಿವೃದ್ಧಿ!

ಪಶ್ಚಿಮ ಬಂಗಾಳದ ಸಿಎಸ್ಐಆರ್ ಪ್ರಯೋಗಾಲಯ ಅತ್ಯಂತ ಕಡಿಮೆ ಸ್ಥಳದಲ್ಲಿ ಹೆಚ್ಚು ಸೌರ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪವರ್ ಟ್ರೀ( ಸೌರ ವಿದ್ಯುತ್ ಉತ್ಪಾದನಾ ಮರ)ವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಸಿಎಸ್ ಐಆರ್ ನಿಂದ ಸೌರ ವಿದ್ಯುತ್ ಉತ್ಪಾದಿಸುವ ಮರ ಅಭಿವೃದ್ಧಿ!
ಸಿಎಸ್ ಐಆರ್ ನಿಂದ ಸೌರ ವಿದ್ಯುತ್ ಉತ್ಪಾದಿಸುವ ಮರ ಅಭಿವೃದ್ಧಿ!

ಕೋಲ್ಕತಾ: ಪಶ್ಚಿಮ ಬಂಗಾಳದ ಸಿಎಸ್ಐಆರ್ ಪ್ರಯೋಗಾಲಯ ಅತ್ಯಂತ ಕಡಿಮೆ ಸ್ಥಳದಲ್ಲಿ ಹೆಚ್ಚು ಸೌರ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪವರ್ ಟ್ರೀ( ಸೌರ ವಿದ್ಯುತ್ ಉತ್ಪಾದನಾ ಮರ)ವನ್ನು ಅಭಿವೃದ್ಧಿ ಪಡಿಸಿದೆ.

ಸುಮಾರು ನಾಲ್ಕು ಚದರ ಅಡಿಯಷ್ಟು ವ್ಯಾಪಿಸುವ ಈ ಸೋಲಾರ್ ಪವರ್ ಟ್ರೀ, ಮೂರು ಕಿಲೋ ವ್ಯಾಟ್ ನಷ್ಟು ವಿದ್ಯುತ್ ಉತ್ಪಾದನೆ ಮಾಡಲಿದ್ದು ಇದರಿಂದ ಮೂರು ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅತ್ಯಂತ ಕಡಿಮೆ ಸ್ಥಳದಲ್ಲಿ ಅತಿ ಹೆಚ್ಚು ವಿದ್ಯುತ್ ನ್ನು ಉತ್ಪಾದನೆ ಮಾಡುವ ಸವಾಲು ಎದುರಾದ್ದರಿಂದ ಈ ರೀತಿಯ ಸೌರ ವಿದ್ಯುತ್ ಉತ್ಪಾದನೆ ಮಾಡುವ ಮರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಿಎಸ್ಐಆರ್ ನ ಮುಖ್ಯ ವಿಜ್ಞಾನಿ ಸಿಬಂತ್ ತಿಳಿಸಿದ್ದಾರೆ. 
ಒಂದು ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಬೇಕಾದರೆ ಐದು ಎಕರೆಯಷ್ಟು ಭೂಮಿ ಬೇಕಾಗುತ್ತದೆ. ಇನ್ನು 10,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 50,000 ಎಕರೆಯಷ್ಟು ಭೂಮಿ ಬೇಕಾಗುತ್ತದೆ, ಬಿಹಾರ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಇದು ಸವಾಲಿನ ಸಂಗತಿಯಾಗಿರುವುದರಿಂದ ಕಡಿಮೆ ಸ್ಥಳದಲ್ಲೇ ಅತಿ ಹೆಚ್ಚು ಸೌರ ವಿದ್ಯುತ್ ಉತ್ಪಾದನೆಗೆ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು ಆದ್ದರಿಂದ ಸೌರ ವಿದ್ಯುತ್ ಮರವನ್ನು ಅಭಿವೃದ್ಧಿಪಡಿಸಬೇಕಾಯಿತು ಎಂದು ಸಿಬಂತ್ ತಿಳಿಸಿದ್ದಾರೆ.

ಸಿಎಂಇಆರ್ ಐ ಗೆ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಭೇಟಿ ನೀಡಿದ್ದ ವೇಳೆ ಸೋಲಾರ್ ಪವರ್ ಟ್ರೀ ಯನ್ನು ಉದ್ಘಾಟನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com