ಇಸ್ರೋ ಭುವನ್ ನಮಗೆ ಸ್ಪರ್ಧಿಯಲ್ಲ: ಗೂಗಲ್ ಇಂಡಿಯಾ ಅಧಿಕಾರಿ

ಇಸ್ರೋ ಬಿಡುಗಡೆ ಮಾಡಿರುವ ಜಿಯೋ ಪೋರ್ಟಲ್ ಮೊಬೈಲ್ ಆಪ್ ಅನ್ನು ನಾವು ಸ್ಪರ್ಧಿಯಂತೆ ಕಾಣುವುದಿಲ್ಲ ಎಂದು ಗೂಗಲ್ ಇಂಡಿಯಾದ ಅಧಿಕಾರಿ ಗುರುವಾರ ಹೇಳಿದ್ದಾರೆ.
ಇಸ್ರೋ ಭುವನ್ ಆಪ್ ದೃಶ್ಯ
ಇಸ್ರೋ ಭುವನ್ ಆಪ್ ದೃಶ್ಯ
ಕೋಲ್ಕತ್ತಾ: ಇಸ್ರೋ ಬಿಡುಗಡೆ ಮಾಡಿರುವ ಜಿಯೋ ಪೋರ್ಟಲ್ ಮೊಬೈಲ್ ಆಪ್ ಅನ್ನು ನಾವು ಸ್ಪರ್ಧಿಯಂತೆ ಕಾಣುವುದಿಲ್ಲ ಎಂದು ಗೂಗಲ್ ಇಂಡಿಯಾದ ಅಧಿಕಾರಿ ಗುರುವಾರ ಹೇಳಿದ್ದಾರೆ. ಇಂತಹ ಮಾಹಿತಿ ಹಂಚಿಕೊಳ್ಳುವ ಆಪ್ ವೇದಿಕೆಗಳು ಈ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಎಂದು ಅವರು ತಿಳಿಸಿದ್ದಾರೆ. 
"ನಾವು ಮಾಡಿರುವ ಪರಿಶೀಲನೆಯ ಪ್ರಕಾರ ಅದು ಮಾಹಿತಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ. ನಾವು ವಿವಿಧ ಆಪ್ ಗಳನ್ನು ಸ್ಪರ್ಧಿಗಳೆಂದು ಕಾಣುವುದಿಲ್ಲ. ಏಕೆಂದರೆ ನಾವೆಲ್ಲರೂ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಗೂಗಲ್ ಇಂಡಿಯಾ ಮ್ಯಾಪ್ ನ ಹಿರಿಯ ಅಧಿಕಾರಿ ಸಂಕೇತ್ ಗುಪ್ತ ಹೇಳಿದ್ದಾರೆ. 
"ಇನ್ನು ಕ್ರಮಿಸುವುದಕ್ಕೆ ಸಾಕಷ್ಟಿದೆ.... ಇದು ಅತ್ಯುತ್ತಮ ಅನುಭವ ಮತ್ತು ಈ ಕ್ಷೇತ್ರಕ್ಕೆ ಒಳ್ಳೆಯ ಬೆಳವಣಿಗೆ" ಎಂದು ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಭೂಮಿಯ ಮೇಲ್ಮೈಯನ್ನು  2ಡಿ/3ಡಿ  ಯಲ್ಲಿ ಮೊಬೈಲ್ ಪರದೆ ಮೇಲೆ ಬಿಡಿಸುವ ಈ ಭುವನ್ ಆಪ್ ಅನ್ನು ಭಾರತೀಯ ಖಗೋಳಶಾಸ್ತ್ರ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ. 
ಭಾರತದ ಭಾಗವನ್ನು ಹೆಚ್ಚು ಸೂಕ್ಷ್ಮವಾಗಿ ವೀಕ್ಷಿಸಲು ಈ ಮ್ಯಾಪಿಂಗ್ ಆಪ್ ಅನ್ನು ರೂಪಿಸಲಾಗಿದೆ ಮತ್ತು ನಾಲ್ಕು ಭಾಷೆಗಳಲ್ಲಿ ಸದ್ಯಕ್ಕೆ ಸೇವೆಗಳನ್ನು ಒದಗಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com