ಇನ್ನು 1 ಸಾವಿರ ವರ್ಷ ಮಾತ್ರ ಭೂಮಿ ಮೇಲೆ ಮಾನವ ವಾಸಿಸಬಹುದು: ಹಾಕಿಂಗ್

ಮಾನವ ಸಂತತಿ ಇನ್ನು 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ...
ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್
Updated on
ಲಂಡನ್: ಮಾನವ ಸಂತತಿ ಇನ್ನು 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಬ್ರಿಟನ್ ಆಕ್ಸ್ ಫರ್ಡ್ ಯೂನಿಯನ್ ನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಕಿಂಗ್, ಮಾನವರು ವಾಸಿಸಲು ಭೂಮಿಯನ್ನು ಬಿಟ್ಟು ಬೇರೆ ಗ್ರಹ ಅಥವಾ ಸ್ಥಳವನ್ನು ನೋಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. 
ಸದ್ಯದ ಪರಿಸ್ಥಿತಿ ಗಮನಿಸಿದರೆ ಭೂಮಿಯಲ್ಲಿ ಇನ್ನು ಹೆಚ್ಚು ವರ್ಷ ಬದುಕಲು ಆಗುವುದಿಲ್ಲ, ಎಚ್ಚೆಂದರೆ ಸಾವರಿ ವರ್ಷವಷ್ಟೇ ಇಲ್ಲಿರಲು ಸಾಧ್ಯವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಮಂಗಳ ಗ್ರಹದಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಮಾನವ ವಸಾಹತು ನಿರ್ಮಿಸಲು ನೂರಕ್ಕಿಂತ ಹೆಚ್ಚು ವರ್ಷ ಬೇಕು. ಅಷ್ಟರಲ್ಲಿ ಮಾನವರು ಬೇರೆ ಬೇರೆ ಸ್ಥಳಗಳನ್ನು ಶೋಧಿಸಲು ಯತ್ನಿಸುತ್ತಲೇ ಇರಬೇಕು ಎಂದರು. 
ವಿದ್ಯಾರ್ಥಿಗಳು ಕೆಳಗಿರುವ ನೆಲದ ಬದಲು ಮೇಲಿರುವ ತಾರೆಗಳತ್ತ ನೋಡುತ್ತಿರಿ. ಈ ವಿಶ್ವವು ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಕಲ್ಪಿಸಿಕೊಳ್ಳಿ ಆಗ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com