ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೃಥ್ವಿ-೨ ಜೋಡಿ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ದೇಶೀಯವಾಗಿ ಅಭಿವೃದ್ಧಿಪಡಿಸಿರುವ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ-೨ ಜೋಡಿ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತ ಸೋಮವಾರ ಯಶಸ್ವಿಯಾಗಿ
Published on
ಭುವನೇಶ್ವರ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ, ಅಣುಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ-೨ ಜೋಡಿ ಕ್ಷಿಪಣಿಯನ್ನು ಒರಿಸ್ಸಾದ ಚಂಡಿಪುರ್ ನಿಂದ ಭಾರತ ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಿದೆ. 
ಮಧ್ಯಮ ವ್ಯಾಪ್ತಿಯ ನೆಲದಿಂದ ನೆಲಕ್ಕೆ ಜಿಗಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೇನೆ ಸುಮಾರು ಬೆಳಗ್ಗೆ ೯:೩೫ ಕ್ಕೆ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಮೂಲಗಳು ತಿಳಿಸಿವೆ. 
೩೫೦ ಕಿಮಿ ದೂರದ ಗುರಿಗೆ ಹೊಡೆಯುವ ಶಕ್ತಿ ಹೊಂದಿರುವ ಈ ಕ್ಷಿಪಣಿಗಳು ೫೦೦ ರಿಂದ ೧೦೦೦ ಕೆಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊರಬಲ್ಲವಾಗಿವೆ ಮತ್ತು ಇವುಗಳಿಗೆ ಜೋಡಿ ಎಂಜಿನ್ ಗಳನ್ನೂ ಕೂಡಿಸಲಾಗಿದೆ. 
ಈ ಸಂಪೂರ್ಣ ಚಟುವಟಿಕೆಗಳನ್ನು ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ನಡೆಸಿದ್ದು, ಡಿ ಆರ್ ಡಿ ಒ ಮೇಲುಸ್ತುವಾರಿಯಲ್ಲಿ ಇದು ನಡೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com