ಎರಡು ತಿಂಗಳ ನಂತರ ಈ ಫೋನ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ

ಇನ್ನೆರಡು ತಿಂಗಳು ಕಳೆದ ನಂತರ ಕೆಲವು ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ.
ವಾಟ್ಸ್ ಆಪ್
ವಾಟ್ಸ್ ಆಪ್
Updated on

ನವದೆಹಲಿ: ಇನ್ನೆರಡು ತಿಂಗಳು ಕಳೆದ ನಂತರ ಕೆಲವು ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ. ನಿರ್ದಿಷ್ಟ ಆಪರೇಟಿಂಗ್ ಸಿಸ್ಟಮ್ ವಾಟ್ಸ್ ಆಪ್ ನೊಂದಿಗೆ ಹೊಂದಾಣಿಕೆ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಕೆಲವು ಮೊಬೈಲ್ ಫೋನ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ.

2016 ರ ಅಂತ್ಯಕ್ಕೆ ವಾಟ್ಸ್ ಆಪ್ ಸ್ಥಗಿತಗೊಳ್ಳಲಿರುವ ಮೊಬೈಲ್ ಗಳ ವಿವರ:


ಬ್ಲಾಕ್ ಬೆರಿ ಒಎಸ್ ಹಾಗೂ ಬ್ಲಾಕ್ ಬೆರಿ 10

ನೋಕಿಯಾ ಎಸ್ 40

ನೋಕಿಯಾ ಸಿಂಬಿಯಾನ್ ಎಸ್ 60

ಆಂಡ್ರಾಯ್ಡ್ 2.1 ಹಾಗೂ ಆಂಡ್ರಾಯ್ಡ್ 2.2 
ವಿಂಡೋಸ್ ಫೋನ್ 7.1

ಐಫೋನ್ 3 ಜಿಎಸ್/ ಐಒಎಸ್ 6

ನಿರ್ದಿಷ್ಟ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಮೆಸೇಂಜರ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದರ ಬಗ್ಗೆ ಪ್ರಕಟಣೆ ನೀಡಿರುವ ವಾಟ್ಸ್ ಆಪ್, ಸಂಸ್ಥೆ ಮುಂದಿನ 7 ವರ್ಷಗಳಲ್ಲಿ ಆಪ್ ಗಳ ವೈಶಿಷ್ಟ್ಯ( ಆಯ್ಕೆ) ಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಆದರೆ ಕೆಲವೊಂದು ಆಪರೇಟಿಂಗ್ ಸಿಸ್ಟಮ್ ಗಳ ಮೂಲಕ ಕಾರ್ಯನಿರ್ವಹಿಸುವ ಮೊಬೈಲ್ ಗಳಲ್ಲಿ ಆಪ್ ನಲ್ಲಿ ನೀಡಲಾಗುವ ಹೊಸ ಆಯ್ಕೆಗಳಿಗೆ ಪೂರಕವಾದ ಸಾಮರ್ಥ್ಯಗಳಿಲ್ಲ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಒಎಸ್ ನ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಮೆಸೇಂಜರ್ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿದ್ದು ಆಪ್ ಆಪ್ ಗ್ರೇಡ್ ಮಾಡುವುದಕ್ಕೆ ಪೂರಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com