ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್: ಈಗೇ ಒಂದೇ ಟಚ್ ನಲ್ಲಿ ಅನ್ ಬ್ಲಾಕ್, ಗುಂಪಿನಲ್ಲಿದ್ದರೂ ಖಾಸಗಿಯಾಗಿ ಮೆಸೇಜ್ ಕಳಿಸಬಹುದು

ಸುಮಾರು ಒಂದು ಬಿಲಿಯನ್ ಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ.

ವಾಟ್ಸ್ ಆಪ್: ಈಗೇ ಒಂದೇ ಟಚ್ ನಲ್ಲಿ ಅನ್ ಬ್ಲಾಕ್, ಗುಂಪಿನಲ್ಲಿದ್ದರೂ ಖಾಸಗಿಯಾಗಿ ಮೆಸೇಜ್ ಕಳಿಸಬಹುದು
ವಾಟ್ಸ್ ಆಪ್
Published On :
ಸ್ಯಾನ್ ಫ್ರಾನ್ಸಿಸ್ಕೊ: ಸುಮಾರು ಒಂದು ಬಿಲಿಯನ್ ಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ. 
ಕೇವಲ ಒಂದು ಟಚ್ ನಿಂದ ಬ್ಲಾಕ್ ಮಾಡಿದ್ದ ವ್ಯಕ್ತಿಯೊಂದಿಗೆ ಮತ್ತೆ ಚಾಟ್ ಆರಂಭಿಸಲು ಸಾಧ್ಯವಾಗುವ ಆಯ್ಕೆ ಹಾಗೂ ಗುಂಪಿನಲ್ಲಿದ್ದುಕೊಂಡೇ ಅಲ್ಲಿನ ಸಂದೇಶಗಳಿಗೆ ವ್ಯಕ್ತಿಗಳಿಗೆ ಖಾಸಗಿ ಸಂದೇಶ ರವಾನೆ ಮಾಡುವುದಕ್ಕೆ ಸಾಧ್ಯವಾಗುವ ಆಯ್ಕೆಗಳನ್ನು ಹೊಸ ಆವೃತ್ತಿಯಲ್ಲಿ ನೀಡಲಿದೆ. 
ಗುಂಪಿನಲ್ಲಿದ್ದುಕೊಂಡೇ ಅಲ್ಲಿಯೇ ವ್ಯಕ್ತಿಗಳಿಗೆ ಖಾಸಗಿ ಸಂದೇಶ ಕಳಿಸಬಹುದಾಗಿರುವುದು ಕುತೂಹಲ ಮೂಡಿಸಿರುವ ಆಯ್ಕೆಯಾಗಿದೆ. ಇನ್ನು ವಾಟ್ಸ್ ಆಪ್ ಬಳಕೆ ಮಾಡುತ್ತಿರುವಾಗ ಕೇವಲ ಒಮ್ಮೆ ಫೋನ್ ನನ್ನು ಅಲುಗಾಡಿಸಿದರೆ ಚಾಟ್ ನಲ್ಲಿ ಸರಿಯಾಗಿರದ, ಅಥವಾ ಆಕ್ಷೇಪಾರ್ಹ ಅಂಶಗಳನ್ನು ರಿಪೋರ್ಟ್ ಮಾಡುವ ವ್ಯವಸ್ಥೆಯನ್ನೂ ಮುಂದಿನ ದಿನಗಳಲ್ಲಿ ಪರಿಚಯಿಸಲಾಗುತ್ತದೆ ಎಂದು ವಾಟ್ಸ್ ಆಪ್ ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.