ಡಿ.31 ರಿಂದ ಈ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ ಆಪ್ ಕೆಲಸ ಮಾಡುವುದಿಲ್ಲ!

ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಡಿ.31 ರಿಂದ ನಿರ್ದಿಷ್ಟ ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ವಾಟ್ಸ್ ಆಪ್
ವಾಟ್ಸ್ ಆಪ್
ಸ್ಯಾನ್ ಫ್ರಾನ್ಸಿಸ್ಕೊ: ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಡಿ.31 ರಿಂದ ನಿರ್ದಿಷ್ಟ ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎಂದು ಸಂಸ್ಥೆ ತಿಳಿಸಿದೆ.  
ಎಕ್ಸ್ ಪ್ರೆಸ್.ಕೋ.ಯುಕೆ ವರದಿಯ ಪ್ರಕಾರ, ಬ್ಲ್ಯಾಕ್ ಬೆರಿ ಒಎಸ್, ಬ್ಲ್ಯಾಕ್ ಬೆರಿ 10, ವಿಂಡೋಸ್ ಫೋನ್ 8.0 ಗಳಲ್ಲಿ ಡಿ.31 ರಿಂದ ವಾಟ್ಸ್ ಆಪ್ ತನ್ನ ಸಪೋರ್ಟ್ ನ್ನು ವಾಪಸ್ ಪಡೆಯಲಿದ್ದು, ಈ ಫೋನ್ ಗಳಿಗೆ ಹೊಸದಾಗಿ ವಾಟ್ಸ್ ಆಪ್ ನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಹೇಳಿದೆ.    
ಆಪ್ ನ ವೈಶಿಷ್ಟ್ಯಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ಮುಂಬರುವ ಬದಲಾವಣೆಗಳಿಗೆ ಈ ಫೋನ್ ಗಳು ಸಹಕರಿಸುವುದಿಲ್ಲ, ಈ ಫೋನ್ ಗಳಲ್ಲಿ ವಾಟ್ಸ್ ಆಪ್ ಬಳಕೆ ಮಾಡಬೇಕೆಂದರೆ ಆಪರೇಟಿಂಗ್ ಸಿಸ್ಟಮ್ ನ್ನು ಆಂಡ್ರಾಯ್ಡ್ ಒಎಸ್ 4.0+ ಐಫೋನ್ ಐಒಎಸ್ 7+, ವಿಂಡೋಸ್ 8.1+ ಗೆ ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ. 
ಡಿಸೆಂಬರ್ 2018 ರ ನಂತರ ನೋಕಿಯಾ ಎಸ್ 40 ಯಲ್ಲೂ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com