ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಪ್ರಾರಂಭಿಸಲಾಗಿರುವ ಭೀಮ್ (ಭಾರತ್ ಇಂಟರ್ ಫೇಸ್ ಮನಿ) ಆಪ್ ಈಗ ಆಪಲ್ ಐಫೋನ್ ಗಳಲ್ಲಿಯೂ ಲಭ್ಯವಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಹೇಳಿದೆ.
ಮುಂಬೈ: ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಲು ಪ್ರಾರಂಭಿಸಲಾಗಿರುವ ಭೀಮ್ (ಭಾರತ್ ಇಂಟರ್ ಫೇಸ್ ಮನಿ) ಆಪ್ ಈಗ ಆಪಲ್ ಐಫೋನ್ ಗಳಲ್ಲಿಯೂ ಲಭ್ಯವಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಹೇಳಿದೆ.
ಆಧಾರ್ ಆಧಾರಿತ ಪಾವತಿ ಮಾಡಲು ಪ್ರಾರಂಭಿಸಲಾಗಿರುವ ಭೀಮ್ ಆಪ್ ಸೌಲಭ್ಯವನ್ನು ಐಒಎಸ್( ಐಫೋನ್) ಗಳಿಗೂ ಒದಗಿಸಲಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಐಫೋನ್ ಬಳಕೆದಾರರೂ ಸಹ ಭೀಮ್ ಆಪ್ ನ್ನು ಬಳಕೆ ಮಾಡಬಹುದಾಗಿದೆ ಎಂದು ಎನ್ ಪಿಸಿಐ ಹೇಳಿದೆ.
ಐಒಎಸ್(ಐಫೋನ್) ಗಳಲ್ಲೂ ಭೀಮ್ ಆಪ್ ನ್ನು ಪರಿಚಯಿಸಲಾಗಿದ್ದು, ಈಗ ಶೇ.100 ರಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ಭೀಮ್ ಆಪ್ ನ್ನು ಬಳಕೆ ಮಾಡುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ನಗದು ರಹಿತ ವಹಿವಾಟು ಇನ್ನೂ ಹೆಚ್ಚುವ ಸಾಧ್ಯವಿದೆ ಎಂದು ಎನ್ ಪಿಸಿಐ ನಿರ್ದೇಶಕ ಹಾಗೂ ಸಿಇಒ ಎಪಿ ಹೋಟಾ ಹೇಳಿದ್ದಾರೆ.