ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ ಹೆಚ್ಚಿಸಲಿರುವ ಭಾರತ

ಸೂಪರ್ ಸೋನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು ಮಾ.10 ರ ವೇಳೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಎಂದು ಡಿಆರ್ ಡಿಒ ಮುಖ್ಯಸ್ಥರು ತಿಳಿಸಿದ್ದಾರೆ.
ಬ್ರಹ್ಮೋಸ್ ಕ್ಷಿಪಣಿ
ಬ್ರಹ್ಮೋಸ್ ಕ್ಷಿಪಣಿ
ಬೆಂಗಳೂರು: ಸೂಪರ್ ಸೋನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು ಮಾ.10 ರ ವೇಳೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಎಂದು ಡಿಆರ್ ಡಿಒ ಮುಖ್ಯಸ್ಥರು ತಿಳಿಸಿದ್ದಾರೆ. 
ಬ್ರಹ್ಮೋಸ್ ಕ್ಷಿಪಣಿ ಸಧ್ಯಕ್ಕೆ 300 ಕಿಮೀ ದೂರ ತಲುಪುವ ವ್ಯಾಪ್ತಿಯನ್ನು ಹೊಂದಿದ್ದು, ಇದನ್ನು 450 ಕಿಮೀ ಗೆ ಹೆಚ್ಚಿಸಲು ಡಿಆರ್ ಡಿಒ ಸಿದ್ಧತೆ ನಡೆಸಿದೆ. 2016 ರ ಜೂನ್ ನಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಆಯ್ಕೆಗೊಂಡ ಬೆನ್ನಲ್ಲೇ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿದೆ. 
300 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಬ್ರಹ್ಮೋಸ್ ಕ್ಷಿಪಣಿ ಭಾರತ-ರಷ್ಯಾ ಜಂಟಿ ಕೊಡುಗೆಯಾಗಿದ್ದು, ವ್ಯಾಪ್ತಿಯ ಹೆಚ್ಚಳಕ್ಕೆ ಸಾಫ್ಟ್ ವೇರ್ ನ್ನು ಬದಲಾವಣೆ ಮಾಡಬೇಕಿದ್ದು, ಬದಲಾವಣೆಯ ನಂತರ 450 ಕಿಮೀ ವ್ಯಾಪ್ತಿ ದೂರಕ್ಕೆ ಪರೀಕ್ಷಾರ್ಥ ಪ್ರಯೋಗ ಮಾಡಲಾಗುತ್ತದೆ ಎಂದು ಡಿಆರ್ ಡಿಒ ತಿಳಿಸಿದೆ. ಇಷ್ಟಲ್ಲದೇ 800 ಕಿಮೀ ವ್ಯಾಪ್ತಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಯ ಮುಂದುವರಿದ ಕ್ಷಿಪಣಿಯನ್ನೂ ಡಿಆರ್ ಡಿಒ ತಯಾರಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com