ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಹಿಸಲಿರುವ ಹೆಚ್ಎಎಲ್

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಫ್ಟರ್ ಗಾಗಿ ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೆಚ್ಎಎಲ್ ನಿರ್ವಹಣೆ ಮಾಡಲಿದೆ.
ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಹಿಸಲಿರುವ ಹೆಚ್ಎಎಲ್
ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಫ್ಟರ್ ಗಾಗಿ ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೆಚ್ಎಎಲ್ ನಿರ್ವಹಣೆ ಮಾಡಲಿದೆ. 
ಹೆಚ್ಎಎಲ್ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಣೆ ಮಾಡುವುದನ್ನು ಸ್ವೀಡನ್ ದೇಶದ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಸಾಬ್ ತಿಳಿಸಿದೆ. ಹೆಚ್ಎಎಲ್ ನ ಏವಿಯಾನಿಕ್ಸ್ ವಿಭಾಗದೊಂದಿಗೆ ಸುಮಾರು 8.5 ಮಿಲಿಯನ್ (57 ಕೋಟಿ) ಮೊತ್ತದ ಒಪ್ಪಂದಕ್ಕೆ ಸ್ವೀಡನ್ ಕಂಪನಿ ಸಹಿ ಹಾಕಿದ್ದು, ಹೆಚ್ಎಎಲ್ ಐಡಿಎಎಸ್ ವ್ಯವಸ್ಥೆಯನ್ನು ನಿರ್ವಹಿಸಲಿದೆ ಎಂದು ಸಾಬ್ ಏರೋ ಇಂಡಿಯಾ-2017 ಎಕ್ಸ್ ಪೋ ನಲ್ಲಿ ತಿಳಿಸಿದೆ. 
ಮಿಲಿಟರಿ ಯುದ್ಧ ವಿಮಾನವನ್ನು ಎದುರಾಗುವ ಕ್ಷಿಪಣಿ ದಾಳಿಗಳಿಂದ ರಕ್ಷಿಸಲು ಐಡಿಎಎಸ್ ವ್ಯವಸ್ಥೆ ಸಹಕಾರಿಯಾಗಿರಲಿದೆ. ತಂತ್ರಜ್ಞಾನ ವರ್ಗಾವಣೆ ಅಡಿಯಲ್ಲಿ ಹೆಚ್ಎಎಲ್ ಹಾಗೂ ಸಾಬ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಹೈದರಾಬಾದ್ ನ ಹೆಚ್ಎಎಲ್ ಯುನಿಟ್ ಗೆ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com