ಡಿಜಿಟಲ್ ಪೇಮೆಂಟ್ ಆವೃತ್ತಿಗೂ ಕಾಲಿಡಲಿದೆ ವಾಟ್ಸ್ ಆಪ್?

ವಾಟ್ಸ್ ಆಪ್ ಡಿಜಿಟಲ್ ಪೇಮೆಂಟ್ ಆವೃತ್ತಿಯನ್ನೂ ಪ್ರಾರಂಭಿಸಲಿದೆಯೇ? ಹೀಗೊಂದು ನಿರೀಕ್ಷೆ ವಾಟ್ಸ್ ಆಪ್ ನ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಂಟಾಗಿದೆ.
ಡಿಜಿಟಲ್ ಪೇಮೆಂಟ್ ಆವೃತ್ತಿಗೂ ಕಾಲಿಡಲಿದೆ ವಾಟ್ಸ್ ಆಪ್?
ಡಿಜಿಟಲ್ ಪೇಮೆಂಟ್ ಆವೃತ್ತಿಗೂ ಕಾಲಿಡಲಿದೆ ವಾಟ್ಸ್ ಆಪ್?
ನವದೆಹಲಿ: ವಾಟ್ಸ್ ಆಪ್ ಡಿಜಿಟಲ್ ಪೇಮೆಂಟ್ ಆವೃತ್ತಿಯನ್ನೂ ಪ್ರಾರಂಭಿಸಲಿದೆಯೇ? ಹೀಗೊಂದು ನಿರೀಕ್ಷೆ ವಾಟ್ಸ್ ಆಪ್ ನ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಂಟಾಗಿದೆ. 
2009 ರಲ್ಲಿ ಪ್ರಾರಂಭವಾಗಿ  ವಿಶ್ವಾದ್ಯಂತ 1.2 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಗೆ ಈಗ 8 ವರ್ಷ. ವಾರ್ಷಿಕೋತ್ಸವದ ವೇಳೆಯಲ್ಲಿ ಭಾರತಕ್ಕೆ ಭೇಟಿ ನೀಡಿರುವ ವಾಟ್ಸ್ ಆಪ್ ನ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸಂದರ್ಶನ ನೀಡಿದ್ದು ವಾಟ್ಸ್ ಆಪ್ ಮುಂದಿನ ದಿನಗಳಲ್ಲಿ ಡಿಜಿತಲ್ ಪೇಮೆಂಟ್ ಆವೃತ್ತಿಯನ್ನೂ ಪರಿಚಯಿಸಲಿರುವುದರ ಬಗ್ಗೆ ಸೂಚನೆ ನೀಡಿದ್ದಾರೆ. 
ಭಾರತದಲ್ಲಿ ವಾಟ್ಸ್ ಆಪ್ ಗೆ 200 ಮಿಲಿಯನ್ ಬಳಕೆದಾರರಿದ್ದು, ಭಾರತ ವಾಟ್ಸ್ ಆಪ್ ನ ಅತಿ ದೊಡ್ಡ ಜಾಗತಿಕ ಮಾರುಕಟ್ಟೆಯಾಗಿದೆ. ಸಂದರ್ಶನದಲ್ಲಿ ವಾಟ್ಸ್ ಆಪ್ ನ ಹೊಸ ಪ್ರಯೋಗಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಬ್ರಿಯಾನ್ ಆಕ್ಟನ್, ಬ್ಯುಸಿನೆಸ್ (ಉದ್ಯಮ) ವಲಯದಲ್ಲಿರುವ ಜನರಿಗಾಗಿಯೇ ವಾಟ್ಸ್ ಆಪ್ ಹೊಸ ಕೊಡುಗೆ ನೀಡಲು ಚಿಂತನೆ ನಡೆಸಿದ್ದು, ಈ ವರೆಗೂ ನಾವು ತಲುಪದ ವಾಣಿಜ್ಯ ಸಂದೇಶಗಳ ಆವೃತ್ತಿಯ ಬಗ್ಗೆ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ. 
ಇದೇ ವೇಳೆ, ವಾಟ್ಸ್ ಆಪ್ ಡಿಜಿಟಲ್ ಪೇಮೆಂಟ್ ಗಳ ವಲಯಕ್ಕೂ ಪ್ರವೇಶಿಸುವ ಉದ್ದೇಶ ಹೊಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬ್ರಿಯಾನ್ ಆಕ್ಟನ್, ಈ ಬಗ್ಗೆ ಪ್ರಾಥಮಿಕ ಹಂತದ ಚಿಂತನೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ. ಬ್ರಿಯಾನ್ ಆಕ್ಟನ್ ಅವರ ಈ ಹೇಳಿಕೆ ಕುತೂಹಲ ಮೂಡಿಸಿದ್ದು, ವಾಟ್ಸ್ ಆಪ್  ಡಿಜಿಟಲ್ ಪೇಮೆಂಟ್ ವಲಯದಲ್ಲೂ ಪ್ರವೇಶಿಸಲಿರುವುದರ ಸಾಧ್ಯತೆಗಳನ್ನು ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com