ನೋಕಿಯಾ 3310 ಕ್ಕೆ ಮರು ಜೀವ: ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಬಿಡುಗಡೆ

ಮೊಬೈಲ್ ಫೋನ್ ಗಳ ಪ್ರಾರಂಭದ ದಿನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ನೋಕಿಯಾ 3310 ಕ್ಕೆ ಮರು ಜೀವ ನೀಡಲಾಗಿದ್ದು 17 ವರ್ಷಗಳ ಬಳಿಕ ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ.
ನೋಕಿಯಾ 3310 ಹೊಸ ಆವೃತ್ತಿ
ನೋಕಿಯಾ 3310 ಹೊಸ ಆವೃತ್ತಿ
ಲಂಡನ್: ಮೊಬೈಲ್ ಫೋನ್ ಗಳ ಪ್ರಾರಂಭದ ದಿನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ನೋಕಿಯಾ 3310 ಕ್ಕೆ ಮರು ಜೀವ ನೀಡಲಾಗಿದ್ದು 17 ವರ್ಷಗಳ ಬಳಿಕ ಹೊಸ ವಿನ್ಯಾಸದೊಂದಿಗೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಬಿಡುಗಡೆ ಮಾಡಲಾಗಿದೆ. 
2.4 ಇಂಚಿನ ಟಿಎಫ್‍ಟಿ ಕಲರ್ ಸ್ಕ್ರೀನ್, ಎಲ್ ಇಡಿ ಫ್ಲ್ಯಾಷ್ ಲೈಟ್ ಸಹಿತ 2 ಎಂಪಿ( ಮೆಗಾ ಪಿಕ್ಸಲ್) ಕ್ಯಾಮರಾ, 51 ಗಂಟೆಯ ಎಂಪಿ3 ಪ್ಲೇ ಬ್ಯಾಕ್, 39 ಗಂಟೆಗಳ ಎಫ್ಎಂ ಪ್ಲೇ ಬ್ಯಾಕ್ ಹೊಸದಾಗಿ ಬಿಡುಗಡೆಯಾಗಿರುವ ನೋಕಿಯಾ 3310 ವಿಶೇಷತೆಗಳಾಗಿವೆ. ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಬಿಡುಗಡೆ ಮಾಡಿರುವ ನೋಕಿಯಾ 3310 ಫೋನ್ 1,200 ಎಂಎಎಚ್ ಬ್ಯಾಟರಿ ಹೊಂದಿದ್ದು, 22 ಗಂಟೆಗಳ ಟಾಕ್ ಟೈಂ ನೀಡಿದೆ.
16 ಎಂಬಿ ಆಂತರಿಕ ಮೆಮೊರಿ ಹೊಂದಿರುವ ನೋಕಿಯಾ 3310 ಹೊಸ ಆವೃತ್ತಿಯಲ್ಲಿ ಎಸ್‍ಡಿ ಕಾರ್ಡ್ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಬಹುದಾಗಿದೆ. 2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿದ್ದ ಹಳೆಯ ಆವೃತ್ತಿಯ ಬಾಡಿ ಅತ್ಯಂತ ಗಟ್ಟಿಯಾಗಿತ್ತು. ಎಷ್ಟೇ ಒರಟಾಗಿ ನಿರ್ವಹಿಸಿದರೂ ಫೋನ್ ಹಾನಿಗೊಳಗಾಗುತ್ತಿರಲಿಲ್ಲವಾದ ಕಾರಣ ನೋಕಿಯಾ 3310 ಮಾಡೆಲ್ ಫೋನ್ ಅತ್ಯಂತ ಜನಪ್ರಿಯತೆ ಗಳಿತ್ತು. 
ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಹೊಸ ಆವೃತ್ತಿಯ ನೋಕಿಯಾ 3310 ಬಿಡುಗಡೆಯಾಗಿದ್ದು, $52 ದರ (ಅಂದಾಜು 2600 ರೂ) ನಿಗದಿಪಡಿಸಲಾಗಿದ್ದು, ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡನೇ ತ್ರೈಮಾಸಿಕದಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ನಿಖರ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com